ಸಿದ್ದರಾಮಯ್ಯ ಸಿಎಂ ಆಗಲು ಶ್ರೀಶೈಲ ಪಾದಯಾತ್ರೆ

ರಾಯಚೂರು,ಮಾ.೧೩- ೨೦೨೩ರ ಚುನಾವಣೆ ಆಗಮಿಸಿದ್ದು ಈ ಒಂದು ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಬೇಕು ಎಂದು ದೇವದುರ್ಗದ ಅಭಿಮಾನಿಯೊಬ್ಬ ಅವರ ಭಾವಚಿತ್ರ ಹಿಡದು ಶ್ರೀಶೈಲಕ್ಕೆ ಪಾದಯಾತ್ರೆ ಮಾಡುತ್ತಿದ್ದಾನೆ.
ಹೌದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲ್ಲಿಗೆ ದೊಡ್ಡಿ ಗ್ರಾಮದ, ಸಿದ್ದರಾಮಯ್ಯ ಅಭಿಮಾನಿ ಸಿದ್ದೇಶ್ ಎಂಬುವವರು, ಸಿದ್ದರಾಮಯ್ಯ ಭಾವಚಿತ್ರ ಹಿಡಿದು ಶ್ರೀಶೈಲಕ್ಕೆ ಪಾದಯಾತ್ರೆ ಆರಂಭಿಸಿದ್ದಾರೆ. ಯುಗಾದಿ ಹಬ್ಬದ ನಿಮಿತ್ಯ ಪಾದಯಾತ್ರೆ ತೆರಳುವ ಪ್ರತೀತಿ ಈ ಭಾಗದಲ್ಲಿ ಇದೆ. ವಿಜಯಪುರ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಯುಗಾದಿ ಹಬ್ಬದ ನಿಮಿತ್ಯ ವಿವಿಧ ಹರಕೆಗಳನ್ನು ಹೊತ್ತು ಶ್ರೀಶೈಲಕ್ಕೆ ಪಾದಯಾತ್ರೆ ಮಾಡುತ್ತಾರೆ.
ಈ ಹಿನ್ನೆಲೆಯಲ್ಲಿ ಸಿದ್ದೇಶ್ ಎಂಬ ಸಿದ್ದರಾಮಯ್ಯ ಅಭಿಮಾನಿ ಅವರ ಭಾವಚಿತ್ರ ಹಿಡಿದು ಶ್ರೀಶೈಲ ಮಲ್ಲಿಕಾರ್ಜುನನ ಸನ್ನಿಧಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಬೇಕು ಎಂದು ಹರಕೆ ಕಟ್ಟಿಕೊಂಡಿದ್ದಾರೆ.