ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಶಾಸಕ ಹರ್ಷವರ್ಧನ್

ನಂಜನಗೂಡು: ನ.16:- ನಂಜನಗೂಡು ಕ್ಷೇತ್ರದ ಅಭಿವೃದ್ಧಿಯ ವಿಚಾರವಾಗಿ ಮಾಜಿ ಶಾಸಕÀ ಮತ್ತು ಹಾಲಿ ಶಾಸಕರ ಮಾತಿನ ಜಟಾಪಟಿ ಮುಂದುವರೆದಿದೆ.
ನಂಜನಗೂಡು ಕ್ಷೇತ್ರದ ಅಭಿವೃದ್ಧಿಯ ವಿಚಾರವಾಗಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಶಾಸಕ ಹರ್ಷವರ್ಧನ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಂಜನಗೂಡು ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿದ್ದೇನೆ ಎನ್ನುತ್ತಾರೆ. ಇದು ಯಾರಪ್ಪನ ದುಡ್ಡಲ್ಲ ಇದು ಸರ್ಕಾರದ ದುಡ್ಡು ಉಪಚುನಾವಣೆಯ ಸಂದರ್ಭದಲ್ಲಿ ನಂಜನಗೂಡು ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಬಿಡುಗಡೆಯೋ ಅಥವಾ ಶ್ರೀನಿವಾಸಪ್ರಸಾದ್ ಸೋಲಿಸಲು ತಂದಿದ್ದ ಹಣವು ಎಂದು ಶಾಸಕ ಹರ್ಷವರ್ಧನ್ ಪ್ರಶ್ನೆ ಮಾಡಿದರು.
ಉಪಚುನಾವಣೆಯಲ್ಲಿ ಬಿಡುಗಡೆಯಾದ ಹಣವು ಎಲ್ಲವೂ ವಾಪಸ್ ಹೋಗಿದೆ ನಾನು ಗೆದ್ದಮೇಲೆ ಪುನಹ ಹಣ ವಾಪಸ್ ತರಲು ಎಷ್ಟು ಕಷ್ಟ ಬಿದ್ದಿದ್ದೇನೆ ಎಂದು ನನಗೆ ಮಾತ್ರ ಗೊತ್ತು ನಂಜನಗೂಡು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿರುವುದು ಮತದಾರರಿಗೆ ಗೊತ್ತು ಯಾರತ್ರ ಸರ್ಟಿಫಿಕೇಟ್ ಬೇಕಾಗಿಲ್ಲ ನಾನು ಮುಂದಿನ ಚುನಾವಣೆಗೆ ಹೋಗಲು ಶ್ರೀನಿವಾಸಪ್ರಸಾದ್ ಮಾಡಿರುವ ಕೆಲಸವನ್ನು ಬಿಟ್ಟು ನನ್ನ ಅಭಿವೃದ್ಧಿಯಲ್ಲಿ ಆಗಿರುವ ಕೆಲಸ ಶ್ವೇತ ಪತ್ರವನ್ನು ಹೊರಡಿಸಿ ನಾನು ಮುಂದಿನ ಚುನಾವಣೆಗೆ ಮತದಾರರ ಹೋಗುತ್ತೇನೆ ಎಂದರು.
ಮಾಜಿ ಶಾಸಕ ರೇ ಉಪಚುನಾವಣೆಯಲ್ಲಿ ತಂದಿದ್ದ ಹಣದಲ್ಲಿ ಯಾವುದಾದರೂ ಕಾಮಗಾರಿ ಉಳಿದಿದ್ದರೆ ನೀವೇ ಗುದ್ದಲಿ ಪೂಜೆ ಮಾಡಿ ಎಂದರು ಈ ರೀತಿ ಮಾತನಾಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ರವರಿಗೆ ಮಾತಿನಲ್ಲಿ ಉತ್ತರ ಕೊಟ್ಟರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಹಾದೇವಸ್ವಾಮಿ ತಾಲೂಕು ಅಧ್ಯಕ್ಷ ಮಹೇಶ್ ನಗರಾಧ್ಯಕ್ಷ ಶ್ರೀನಿವಾಸ್ ರೆಡ್ಡಿ ಸೇರಿದಂತೆ ಇತರರಿದ್ದರು.