ಸಿದ್ದರಾಮಯ್ಯ ವಿರುದ್ಧ‌ ಎಫ್ ಐಆರ್

ಮಡಿಕೇರಿ, ಜ. 8-ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ‌ ಎಫ್ ಐ ಆರ್ ದಾಖಲಾಗಿದೆ.
ಕೊಡವರು ದನದ ಮಾಂಸ ಸೇವಿಸುತ್ತಾರೆ ಎಂದು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಪಶ್ಚಿಮಘಟ್ಟ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿ ಕುಶಾಲಪ್ಪ ದೂರು ಸಲ್ಲಿಸಿದ್ದರು.
ಈ ದೂರಿನ ಅನುಸಾರ ಭಾರತೀಯ ದಂಡ ಸಮಿತಿ 153ರ ಅಡಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ.
ಸಿದ್ದರಾಮಯ್ಯ ಈಗ ಆರೋಪಿಯಾಗಿದ್ದು.
ನಾವು ಇಷ್ಕಕ್ಜೆ ಸುಮ್ಮನೆ ಬಿಡುವುದಿಲ್ಲ. ಸಿದ್ದರಾಮಯ್ಯ ಕೋಮು ದ್ವೇಷದ ಬೆಂಕಿ‌ಹಚ್ವಿದ್ದರು. ಯಾರನ್ನೊ ಮೆಚ್ಚಿಸಲು ಅವರು ಕೊಡವರನ್ನು
ಹೀಯಾಳಿಸಬಾರದಿತ್ತು. ಎಂದು ಸುದ್ದಿಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡರು.
ನಿನ್ನೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿ ಬಿಜೆಪಿಯವರು ಗೋಮಾಂಸ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಾರೆ. ನಾನು ದನ ಹಾಗೂ ಎಮ್ಮೆ ಮಾಂಸ ತಿಂದಿಲ್ಲ. ತಿನ್ನಬೇಕು ಅನ್ನುಸಿದರೆ ತಿಂತೀನಿ‌ ಎಂದು ಹೇಳಿದರು.