ಸಿದ್ದರಾಮಯ್ಯ ವಿರುದ್ದ ಬಿಜೆಪಿ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.04: ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ ಅವರು “ದಲಿತರು ಹೊಟ್ಟೆ ಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ” ಎಂದು ನೀಡಿರುವ ಅವಹೇಳನಕಾರಿ ಹೇಳಿಕೆ ವಿರುದ್ಧ ನಗರದಲ್ಲಿ ನಿನ್ನೆ ಬಿಜೆಪಿ ಪ್ರತಿಭಟನೆ ನಡೆಸಿತು.
ಪಕ್ಷದ ಬಳ್ಳಾರಿ ಜಿಲ್ಲಾ ಎಸ್.ಸಿ. ಮೋರ್ಚಾ ದಿಂದ ನಗರದ ಗಡಗಿ ಚೆನ್ನಪ್ಪ‌ ವೃತ್ತದಲ್ಲಿ  ಸೇರಿದ  ಬಳ್ಳಾರಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ರಾಮಾಂಜಿನಿ ಮತ್ತು ಕೆ.ಎಸ್.ಅಶೋಕ್, ಮಾಧ್ಯಮ ಸಂಚಾಲಕ ತೊಗರಿ ರಾಜೀವ್, ನಗರ ಕಾರ್ಯದರ್ಶಿ ಪ್ರಹ್ಲಾದ, ಅಮರ್, ನಗರ ಎಸ್.ಸಿ, ಮೋರ್ಚಾ ಅಧ್ಯಕ್ಷ ಬಿ.ಇ. ರಾಜೇಶ್, ಉಪಾಧ್ಯಕ್ಷ ಕೆ.ಹನುಮಂತ, ಪರಶುರಾಮ, ಗಜೇಂದ್ರ, ಷಣ್ಮುಖ, ಪ್ರಧಾನ ಕಾರ್ಯದರ್ಶಿ ಹುಲುಗಪ್ಪ, ಕಾರ್ಯದರ್ಶಿ ಕುಬೇರ, ಎರಿಸ್ವಾಮಿ, ಟಿ.ಹನುಮಂತ, ವೀರೇಶ್, ಪೋಲನ್ನ, ವೆಂಕಟ್, ಮಣಿಕಂಠ, ಶ್ರೀರಾಮ್ ಹಾಗೂ ಇತರೆ ಬಿ.ಜೆ.ಪಿ, ಕಾರ್ಯಕರ್ತರು  ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿದರು.
 “ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ’ ಎಂಬ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಹೇಳಿಕೆ ಹಿಂಪಡೆಯಬೇಕು ಮತ್ತು ಕ್ಷಮೆ ಕೇಳಬೇಕೆಂದರು.