
ಸಂಜೆವಾಣಿ ನ್ಯೂಸ್
ಮೈಸೂರು: ಸೆ.05:- ಸಿದ್ದರಾಮಯ್ಯ ಲಾಟರಿ ಮುಖ್ಯಮಂತ್ರಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎರಡೂ ಬಾರಿಯೂ ತಮ್ಮ ಶಕ್ತಿ ಮೇಲೆ ಸಿಎಂ ಆಗಲಿಲ್ಲ. 2013ರಲ್ಲಿ ಕೆಜೆಪಿ- ಬಿಜೆಪಿ ಅಂತ ವಿಭಾಗ ಆಗಿತ್ತು.
ಹೀಗಾಗಿ ಕಾಂಗ್ರೆಸ್ ಗೆಲುವು ಸಾಧಿಸಿತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು. ಈ ಬಾರಿ ಗ್ಯಾರಂಟಿ ಅಂತ ಹೇಳಿಕೊಂಡು ಸಿಎಂ ಆಗಿಬಿಟ್ಟರು. ಸಿದ್ದರಾಮಯ್ಯ ಅಪ್ಪಿತಪ್ಪಿ ಸಿಎಂ ಆಗಿದ್ದಾರೆ. ಮುಂದೆ ಲೋಕಸಭೆ ಚುನಾವಣೆ ಬರುತ್ತಿದೆ. ಕಾಂಗ್ರೆಸ್‍ನವರ ಸ್ಥಿತಿ ಏನು ಅಂತ ಆಗ ಗೊತ್ತಾಗುತ್ತೆ ಎಂದು ಹೇಳಿದರು.
ಸಿದ್ದರಾಮಯ್ಯ ಮುಸಲ್ಮಾನರ ದತ್ತು ಪುತ್ರ ಆಗಿದ್ದಾರೆ. ಮುಸಲ್ಮಾನರ ಜಾಗದಲ್ಲಿ ನಿಂತು ಮೋದಿ, ಪ್ರತಾಪ್ ಸಿಂಹ ವಿರುದ್ಧ ಮಾತನಾಡಿದರೆ ಕಾಂಗ್ರೆಸ್‍ಗೆ ಮತ ಬರುತ್ತೆ ಅಂದುಕೊಂಡಿದ್ದಾರೆ. ಅದೇ ಕಾರಣಕ್ಕೆ ಮುಸಲ್ಮಾನರ ಎದುರು ಭಾಷಣ ಮಾಡಿದ್ದಾರೆ. ಇದೆಲ್ಲ ಮುಂದಿನ ಚುನಾವಣೆಯಲ್ಲಿ ನಡೆಯಲ್ಲ ಎಂದರು.
ಅವರೆಲ್ಲಾ ನಾಶವಾಗಿದ್ದಾರೆ. ಇವರೂ ನಾಶವಾಗುತ್ತಾರೆ. ಈ ದೇಶ ಉಳಿದಿರುವುದೇ ಸನಾತನ ಧರ್ಮದಿಂದ’ ಎಂದರು.
ರಾಜ್ಯ ಸರ್ಕಾರವು ಅಭಿವೃದ್ಧಿಗಾಗಿ ಒಂದಿಡೀ ಮಣ್ಣನ್ನೂ ನೀಡಿಲ್ಲ. ನಮ್ಮ ಕಾಲದ ಕಾಮಗಾರಿಗೂ ಅನುದಾನ ನೀಡಿಲ್ಲ. ರಾಜ್ಯದಲ್ಲಿ ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಏನನ್ನೂ ಹೇಳುವುದಿಲ್ಲ. ಅವರಿಗೆ ಒಳ್ಳೆಯ ಬುದ್ದಿ ಕೊಡುವಂತೆ ದೇವರಲ್ಲಿ ಅಂತಾ ಪ್ರಾರ್ಥಿಸುತ್ತೇನೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸೇಫ್ ಇಲ್ಲ. ಲೋಕಸಭೆ ಚುನಾವಣೆಗೂ ಮುಂಚೆ ಅಥವಾ ಆದ ಮೇಲೆ ಈ ಸರ್ಕಾರ ಬೀಳುತ್ತದೆ. ಸರ್ಕಾರ ಹೇಗಿದೆ ಎನ್ನುವುದನ್ನು ಅವರ ಶಾಸಕ ಬಸವರಾಜ ರಾಯರೆಡ್ಡಿ ಅಥವಾ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರನ್ನು ಕೇಳಿ. ಇದು ಲಾಟರಿಯಿಂದ ಬಂದ ಸರ್ಕಾರ. ಒಂದು ಸಲ ಬಿಜೆಪಿ- ಕೆಜೆಪಿಯಿಂದ, ಈಗ ಗ್ಯಾರಂಟಿಗಳಿಂದ ಬಂದಿದೆ. ಸಿದ್ದರಾಮಯ್ಯ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಲ್ಲಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಮುಸ್ಲಿಮರ ಓಲೈಕೆಯಲ್ಲಿ ತೊಡಗಿದ್ದಾರೆ. ಹೀಗಾಗಿಯೇ ಆ ಸಮಾಜದವರ ಎದುರು ಪ್ರತಾಪ ಸಿಂಹ ಅವರನ್ನು ಸೋಲಿಸುವಂತೆ ಕೈಮುಗಿದು ಮನವಿ ಮಾಡಿದ್ದಾರೆ. ಅವರಿಗೆ ಇಂತಹ ದಯನೀಯ ಸ್ಥಿತಿ ಬರಬಾರದಿತ್ತು. ಅವರು ಹೇಳಿದ್ದೆಲ್ಲವೂ ಸುಳ್ಳಾಗಲಿದೆ. ಪ್ರತಾಪ ಮತ್ತೆ ಗೆಲ್ಲುತ್ತಾರೆ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಹೇಳಿದರು.