ಸಿದ್ದರಾಮಯ್ಯ ಮುಖ್ಯಮಂತ್ರಿ: ಜಿಲೇಬಿ ಹಂಚಿದ ಅಭಿಮಾನಿಗಳು

ಬೀದರ್: ಮೇ.21:ಸಿದ್ದರಾಮಯ್ಯ ಅವರು ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಯುಕ್ತ ಬೀದರ್ ತಾಲ್ಲೂಕಿನ ಯಾಕತಪುರ ಗ್ರಾಮದಲ್ಲಿ ಅಭಿಮಾನಿಗಳು ಜಿಲೇಬಿ ಹಂಚಿ ಸಂಭ್ರಮಿಸಿದರು.

ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸುತ್ತಲೇ ಸಿದ್ದರಾಮಯ್ಯ ಅಭಿಮಾನಿ ಬಳಗದ ಸದಸ್ಯರು ಪಟಾಕಿ ಸಿಡಿಸಿದರು. ಕೈಯಲ್ಲಿ ಸಿದ್ದರಾಮಯ್ಯ, ಮಾಜಿ ಶಾಸಕ ಅಶೋಕ ಖೇಣಿ ಅವರ ಭಾವಚಿತ್ರ ಹಿಡಿದು ಜಯ ಘೋಷ ಹಾಕಿ, ವಿಜಯೋತ್ಸವ ಆಚರಿಸಿದರು.

ಬಳಗದ ಪ್ರಮುಖರು, ಗ್ರಾಮದ ಮುಖಂಡರು, ಯುವಕರು ಹಾಗೂ ಮಕ್ಕಳಿಗೆ ಜಿಲೇಬಿ ವಿತರಿಸಿ ಖುಷಿ ಹಂಚಿಕೊಂಡರು.

ಸಿದ್ದರಾಮಯ್ಯ ಅಭಿಮಾನಿ ಬಳಗದ ಪ್ರಮುಖರೂ ಆದ ಬೀದರ್ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ನರಸಪ್ಪ ಯಾಕತಪುರ ನೇತೃತ್ವ ವಹಿಸಿದ್ದರು. ಬೀರಪ್ಪ ಖಂಡೆನೋರ, ಗೌಸೊದ್ದಿನ್, ಈಶ್ವರ ಬಕ್ಕಾನೋರ, ಶಿವು, ಕುವೇಂದ್ರ, ಕೃಷ್ಣ, ಸಿದ್ದಪ್ಪ ಮೊದಲಾದವರು ಇದ್ದರು.