ಸಿದ್ದರಾಮಯ್ಯ ಮತ್ತೆ ಸಿಎಂ;  ಅಭಿಮಾನಿಗಳಿಂದ ಅನ್ನ ಸಂತರ್ಪಣೆ

ದಾವಣಗೆರೆ.ಮೇ.23; ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವುದು ಹಾಗೂ ಡಿ.ಕೆ ಶಿವಕುಮಾರ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದನ್ನು ಸ್ವಾಗತಿಸಿ ದಾವಣಗೆರೆಯ ಶೇಖರಪ್ಪ ನಗರ ಹಾಗೂ ಭಾರತ್ ಕಾಲೋನಿಯ ಕಾಂಗ್ರೆಸ್ ಅಭಿಮಾನಿಗಳು ಆರ್ ಎಂ ಸಿ ರಸ್ತೆಯಲ್ಲಿರುವ ಗಣೇಶ ಹೋಟೆಲ್ ಸರ್ಕಲ್ ಬಳಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಕಾರ್ಯಕ್ರಮದ ಸಂಚಾಲಕ ಕೆ.ಎ ಪಾಪಣ್ಣ ಮಾತನಾಡಿ ದಾವಣಗೆರೆಯ ೧೯ ಹಾಗೂ ೨೦ ನೇ ವಾರ್ಡಿನ  ಶೇಖರಪ್ಪ ನಗರ,ಭಾರತ್ ಕಾಲೋನಿ ಎ ಬ್ಲಾಕ್ ನ ಕಾಂಗ್ರೆಸ್ ಅಭಿಮಾನಿಗಳು ಅನ್ನಸಂತರ್ಪಣೆ ಹಮ್ಮಿಕೊಂಡಿದ್ದೇವೆ. ಸುಮಾರು ೫ ರಿಂದ ೧೦ ಸಾವಿರ ಜನರು ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಕಾಂಗ್ರೆಸ್ ಗೆ ಮತ್ತೆ ಅಧಿಕಾರ ದೊರೆತ ಹಿನ್ನೆಲೆಯಲ್ಲಿ ಗೋಧಿಹುಗ್ಗಿ ಸಿಹಿಯೊಂದಿಗೆ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದೇವೆ ಎಂದರು.ಈ ವೇಳೆ  ದಾದಾಪೀರ್,ಜಗದೀಶ್,ಪರಶುರಾಮಪ್ಪ ಪೂಜಾರ್,ಎಲ್.ವೀರೇಶ್,ತಿಮ್ಮೇಶ್ ನಾಯ್ಕ್,ಹೆಚ್.ವಿ ಪ್ರಭುಲಿಂಗಪ್ಪ,ಅಬ್ದುಲ್,ಲಿಂಗರಾಜ್ ಮತ್ತಿತರರಿದ್ದರು.