
ದಾವಣಗೆರೆ.ಮೇ.೧೭; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ದಾವಣಗೆರೆ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಒಕ್ಕೂಟದ ಸಂಚಾಲಕ ಬಿ.ವೀರಣ್ಣ ಮಾತನಾಡಿ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷಕ್ಕೆ 135 ಸ್ಥಾನಗಳ ಸ್ಪಷ್ಟಬಹುಮತ ಬರಲು ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಇಬ್ಬರ ಪರಿಶ್ರಮ ಬಹಳದೊಡ್ಡದಿದೆ ಅದರಲ್ಲಿ ಸಿದ್ದರಾಮಯ್ಯನವರ ಪರಿಶ್ರಮ ಹೆಚ್ಚಾಗಿದ್ದು ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಕೇವಲ ಒಂದು ಸಮುದಾಯದವರನ್ನು ಓಲೈಕೆ ಮಾಡಿಲ್ಲ. ಸರ್ವ ಜನಾಂಗದವರು ಅವರನ್ನು ಮೆಚ್ಚಿದ್ದಾರೆ ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ ಸಿಎಂ ಸ್ಥಾನವನ್ನು ಪ್ರಥಮವಾಗಿ ನೀಡದೇ ಹೋದರೆ ಮುಂಬರುವ ಲೋಕಸಭಾ ಚುನಾವಣೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಅಹಿಂದವರ್ಗದವರು ಕಾಂಗ್ರೆಸ್ ನಿಂದ ದೂರ ಉಳಿಯುವ ಆತಂಕ ಎದುರಾಗಲಿದೆ. ಸರ್ವ ಜನಾಂಗವನ್ನು ಪ್ರೀತಿಸುವ ಸಿದ್ದರಾಮಯ್ಯ ಜನಮಾನಸದಲ್ಲಿ ದೇವರಾಜ್ ಅರಸುರವರು ಎಂದೇ ಕರೆಸಿಕೊಂಡಿದ್ದಾರೆ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿರುವ ಅಹಿಂದನಾಯಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಇರುವ ಸಿದ್ದರಾಮಯ್ಯಗೆ ಮುಖ್ಯಮಂತ್ರಿಯ ಸ್ಥಾನ ಪ್ರಥಮವಾಗಿ ನೀಡಬೇಕೆಂದು ಒತ್ತಾಯಿಸಿದ್ದಾರೆ. ಎಲ್ಲಾ ಸಮಾಜದವರನ್ನು ತನ್ನ ಜೊತೆಗೆ ಕೊಂಡೊಯ್ಯುವ ಸಮ ಸಮಾಜ ನಿರ್ಮಾಣ ಮಾಡಿದ ವ್ಯಕ್ತಿತ್ವ ಅವರದು. ಅಲ್ಲದೇ ೧೩ ಬಾರಿ ಬಜೆಟ್ ಮಂಡನೆ ಮಾಡಿರುವ ಹೆಗ್ಗಳಿಕೆ ಅವರದು. ಸಿದ್ದರಾಮಯ್ಯನವರು ಹಿಂದಿನ ಅವಧಿಯಲ್ಲಿ ಐದು ವರ್ಷ ಯಾವುದೇ ಕಳಂಕ ವಿಲ್ಲದ ಆಡಳಿತ ನಡೆಸಿದ್ದಾರೆ ಎಲ್ಲಾ ಸಮುದಾಯದ ವ್ಯಕ್ತಿಯಾಗಿದ್ದಾರೆ. ಸರ್ವ ಜನಾಂಗದವರಿಗೆ ಹಲವಾರು ಭಾಗ್ಯಗಳನ್ನು ನೀಡುವುದರ ಮುಖಾಂತರ ರಾಜ್ಯದಜನತೆಯ ನೆರವಾಗಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಿದ್ದಪ್ಪ ಅಡಾಣಿ,ಮಹೇಶ್ ಪೈಲ್ವಾನ್,ಕೆ.ಕಾಳಾಚಾರಿ,ಪ್ರಕಾಶ್,ಕೆ.ರೇವಣಸಿದ್ದಪ್ಪ,ಡಿ.ತಿಪ್ಪಣ್ಣ,ಸುರೇಶ್ ಉಪಸ್ಥಿತರಿದ್ದರು.