ಸಿದ್ದರಾಮಯ್ಯ ಭಾವಚಿತ್ರ ತೆರವು: ಪ್ರತಿಭಟನೆ

ಸಂಜೆವಾಣಿ ನ್ಯೂಸ್
ಮೈಸೂರು ನ 05: ನಗರದ ಲಿಂಗದೇವರ ಕೊಪ್ಪಲಿನ ವಿಜಯನಗರ ಠಾಣೆಯ ಚೆಕ್‍ಪೆÇೀಸ್ಟ್ ವೃತ್ತದಲ್ಲಿ ಅಳವಡಿಸಲಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಚಿತ್ರವುಳ್ಳ ನಾಮಫಲಕ ತೆರವುಗೊಳಿಸಿದ ಪೆÇಲೀಸರ ನಡೆ ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿಗೆ ಶುಕ್ರವಾರ ಅನುಮತಿ ಪತ್ರ ನೀಡಿ ವೃತ್ತಕ್ಕೆ ಸಿದ್ದರಾಮಯ್ಯ ವೃತ್ತ ಎಂದು ಹೆಸರಿಟ್ಟು, ಅಲ್ಲಿ ನಾಮಫಲಕ ಅಳವಡಿಸಿದ್ದೆವು. ಆದರೆ ಬೆಳಗ್ಗಿನ ಜಾವ ಚೆಕ್‍ಪೆÇೀಸ್ಟ್‍ನಲ್ಲಿ ಕಾವಲಿಗಿದ್ದ ಪೆÇಲೀಸರು ಅದನ್ನು ತೆರವುಗೊಳಿಸಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಅವರ ಅಭಿಮಾನಿಗಳ ಒತ್ತಾಸೆಯಂತೆ ವೃತ್ತಕ್ಕೆ ಅವರ ಹೆಸರಿಡಬೇಕು. ಅನುಮತಿ ಪತ್ರ ನೀಡಿದ್ದರೂ ಜನರ ಭಾವನೆಗೆ ಬೆಲೆ ನೀಡದೆ ನಾಮಫಲಕ ತೆರವು ಮಾಡಿರುವುದು ಖಂಡನೀಯ. ವೃತ್ತ ಯಾವ ಠಾಣಾ ವ್ಯಾಪ್ತಿಗೆ ಬರುತ್ತದೆ ಎಂಬ ಬಗ್ಗೆ ವಿಜಯನಗರ ಹಾಗೂ ಇಲವಾಲ ಠಾಣೆಯ ಪೆÇಲೀಸ್ ಅಧಿಕಾರಿಗಳಿಗೆ ಗೊಂದಲವಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನಹರಿಸಿ ವೃತ್ತಕ್ಕೆ ಸಿದ್ದರಾಮಯ್ಯ ಹೆಸರನ್ನು ಇಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಪೆÇಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕ್ಷಣಕಾಲ ಮಾತಿನ ಚಕಮಕಿ ನಡೆಯಿತು.