ಸಿದ್ದರಾಮಯ್ಯ ಪ್ರಮಾಣ ವಚನ ಹಾಲುಮತ ಸಮಾಜದಿಂದ ವಿಜಯೋತ್ಸವ

ತಾಳಿಕೊಟೆ:ಮೇ.21:ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವಿಕರಿಸುತ್ತಿದ್ದಂತೆ ಕುರುಬರ(ಹಾಲುಮತ) ಸಮಾಜ ಬಾಂದವರು ಶನಿವಾರರಂದು ಪಟ್ಟಣದ ಸಂಗೋಳಿ ರಾಯಣ್ಣ ವೃತ್ತದಲ್ಲಿ ಪಟಾಕ್ಷೀ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಸಮಾಜದ ಮುಖಂಡ ಎಸ್.ಎಚ್.ಪೂಜಾರಿ ಅವರು ಮಾತನಾಡಿ ಸಿದ್ದರಾಮಯ್ಯನವರು ಹಾಲುಮತ ಸಮಾಜದಲ್ಲಿ ಜನಿಸಿದ್ದರೂ ಕೂಡಾ ರಾಜ್ಯದ ಜನರ ಏಳಿಗೆ ಬಯಸುವ ಒಂದು ಶಕ್ತಿಯಾಗಿ ಪರಿಣಮಿಸಿದ್ದಾರೆ ದೀನ, ದಲಿತರ, ಶೋಶಿತ ವರ್ಗದವರ ದ್ವನಿಯಾಗಿ ಅವರ ಏಳಿಗೆಗೆ ಶ್ರಮಿಸಿದಂತವರಾಗಿದ್ದಾರೆ ಎರಡನೇ ಭಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸಿದ್ದರಾಮಯ್ಯನವರು ರಾಜ್ಯವನ್ನು ಅಭಿವೃದ್ದಿಯತ್ತ ಕೊಂಡೊಯಲಿದ್ದಾರೆಂದರು.

ಇನ್ನೋರ್ವ ಸಮಾಜದ ಮುಖಂಡ ದೇವರಾಜ ಬಾಗೇವಾಡಿ, ಕಾಂಗ್ರೇಸ್ ಮುಖಂಡ ಪ್ರಭುಗೌಡ ಮದರಕಲ್ಲ, ಜೈಭೀಮ ಮುತ್ತಗಿ, ಅವರು ಮಾತನಾಡಿದರು.

ಈ ಸಮಯದಲ್ಲಿ ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಸಾಹೇಬಣ್ಣ ಆಲ್ಯಾಳ, ನೌಕರರ ಸಂಘದ ಅಧ್ಯಕ್ಷ ಡಾ.ಆಯ್.ಬಿ.ತಳ್ಳೋಳ್ಳಿ, ಮಲ್ಲಣ್ಣ ಹಿರೇಕುರಬರ, ಸುರೇಶ ವಾಲಿಕಾರ, ಕಾಂಗ್ರೇಸ್ ಮುಖಂಡರುಗಳಾದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ, ಪರಶುರಾಮ ತಂಗಡಗಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಮುಸ್ತಫಾ ಚೌದ್ರಿ, ಜಟ್ಟೆಪ್ಪ ಪೂಜಾರಿ, ಜುಮ್ಮಣ್ಣ, ಜಗದೀಶ, ಪರಶುರಾಮ ಅಮಲ್ಯಾಳ, ಮಲ್ಲು ನಾಯ್ಕಲ್, ಸಿದ್ದರೂಡ ಇದ್ದರು.