ಸಿದ್ದರಾಮಯ್ಯ ಪ್ರಮಾಣ ವಚನ : ವಿಜಯೋತ್ಸವ

ಲಿಂಗಸೂಗೂರು,ಮೇ.೨೧- ರಾಜ್ಯದ ನೂತನ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಯಾಗಿ ಡಿಕೆ ಶಿವಕುಮಾರ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಹಾಗೂ ಹಿರಿಯ ಮುಖಂಡ ಅಮರಗುಂಡಪ್ಪ ಮೇಟಿ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ಸ ಕಾರ್ಯಕರ್ತರು ಅಭಿಮಾನಿಗಳು ಪಟ್ಟಣದ ಗಡಿಯಾರ ಚೌಕ ಹತ್ತಿರ ಭಾರಿ ಪ್ರಮಾಣದ ಪಟಾಕಿ ಸಿಡಿಸಿ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.
ಈ ಸಂರ್ಧಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ದಲಿತನಾಯಕ ಪಾಮಯ್ಯ ಮುರಾರಿ, ಮಲ್ಲಣ್ಣ ವಾರದ, ಪುರಸಭೆ ಉಪಾಧ್ಯಕ್ಷ ಮಹ್ಮದ ರಫೀ, ಸದಸ್ಯರಾದ ಶಿವರಾಜ ದೇಗಲಮರಡಿ, ಕುಮಾರಸ್ವಾಮಿ ಸಾಲಮನಿ, ಬಾಬಾ, ಖಾಜಿ ಶರಣು, ಎ.ಮೇಟಿ, ಬಾಲನಗೌಡ, ಮನೋಹರರಡ್ಡಿ, ಅಲ್ಲುಪಟೇಲ್, ಪ್ರಭು ಹವಲ್ದಾರ, ಶ್ವೇತಾ ಲಾಲಗುಂದಿ, ಮಂಜುಳಾ ಬಡಿಗೇರ, ವಿಜಯಕುಮಾರ ಇತರರು ಭಾಗವಹಿಸಿದ್ದರು.