ಸಿದ್ದರಾಮಯ್ಯ ಪ್ರಮಾಣ ವಚನ ಕಾಂಗ್ರೇಸ್ ಕಾರ್ಯಕರ್ತರ ವಿಜಯೋತ್ಸವ

ತಾಳಿಕೊಟೆ:ಮೇ.21: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ ಅವರು ಮತ್ತು 8 ಜನ ಶಾಸಕರು ಸಚೀವರಾಗಿ ಶನಿವಾರರಂದು ಪ್ರಮಾಣ ವಚನ ಸ್ವಿಕರಿಸುತ್ತಿದ್ದಂತೆ ತಾಳಿಕೋಟೆ ಪಟ್ಟಣದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಟಾಕ್ಷೀ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಂಭ್ರಮಾಚರಣೆ ಮಾಡಿದ ಕಾರ್ಯಕರ್ತರು ನಂತರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತಕ್ಕೆ ತೆರಳಿ ಅಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.

ಈ ಸಮಯದಲ್ಲಿ ಕಾಂಗ್ರೇಸ್ ಯುವ ಘಟಕದ ಮಾಜಿ ಅಧ್ಯಕ್ಷ ವಿಜಯಸಿಂಗ್ ಹಜೇರಿ ಅವರು ಮಾತನಾಡಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರವು ಉತ್ತಮ ಆಡಳಿತ ನೀಡಲಿದೆ ಭ್ರಷ್ಟಾಚಾರ ರಹೀತವಾದ ಆಡಳಿತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಡಿ.ಕೆ.ಶಿವಕುಮಾರ ಅವರು ನೀಡಲಿದ್ದಾರೆಂದ ಅವರು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ಅವರು 6ಭಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ರಾಜ್ಯದ ಹಿರಿಯ ಶಾಸಕರಲ್ಲಿ ಮತ್ತು ಪಕ್ಷ ನಿಷ್ಠೆಯಲ್ಲಿ ಗುರುತಿಸಿಕೊಂಡಂತವರಾಗಿದ್ದಾರೆ ಅವರಿಗೆ ಈ ಭಾರಿ ಅವರಿಗೆ ಸಚೀವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.

ಇನ್ನೋರ್ವ ಮುಖಂಡರಾದ ಶ್ರೀಮತಿ ನೀಲಮ್ಮ ಪಾಟೀಲ ಅವರು ಮಾತನಾಡಿ ಕಾಂಗ್ರೇಸ್ ಪಕ್ಷದ ಏಳೆಗೆಗಾಗಿ ದುಡಿದಿರುವಂತಹ ಶಾಸಕ ನಾಡಗೌಡ ಅವರಿಗೆ ಈ ಭಾರಿ ಮಂತ್ರಿ ಭಾಗ್ಯ ಕೊಡಬೇಕು ಇಲ್ಲದಿದ್ದರೆ ಕಾಂಗ್ರೇಸ್ ಮಹಿಳಾ ಘಟಕದ ಕಾರ್ಯಕರ್ತರು ಬೀದಗಿಳಿದು ಹೋರಾಟ ಮಾಡುತ್ತೇವೆಂದರು.

ಮುಖಂಡರಾದ ಪ್ರಭುಗೌಡ ಮದರಕಲ್ಲ ಅವರು ಶಾಸಕ ಸಿ.ಎಸ್.ನಾಡಗೌಡ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೇಸ್ ವರಿಷ್ಠರಲ್ಲಿ ಒತ್ತಾಯಿಸಿದರು.

ಈ ಸಮಯದಲ್ಲಿ ಮುಖಂಡರುಗಳಾದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೈಹಿಬೂಬ ಚೋರಗಸ್ತಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪರಶುರಾಮ ತಂಗಡಗಿ, ಇಬ್ರಾಹಿಂ ಮನ್ಸೂರ, ಮುತ್ತಪ್ಪಣ್ಣ ಚಮಲಾಪೂರ, ರಘುಸಿಂಗ್ ಹಜೇರಿ, ಘನಶಾಮ ಚವ್ಹಾಣ, ಮೋದಿನಸಾ ನಗಾರ್ಚಿ, ಮುಸ್ತಫಾ ಚೌದ್ರಿ, ಆನಂದ ಹಜೇರಿ, ಸಿದ್ದನಗೌಡ ಪಾಟೀಲ, ಶಾಂತು ಮದರಕಲ್ಲ, ಮ್ಯಹಿಬೂಬ ಕೇಂಭಾವಿ, ಸದ್ದಾಂ ಹೊನ್ನುಟಗಿ, ಆಶೀಫ ಕೇಂಭಾವಿ, ಗೋಪಾಲ ಕಟ್ಟಿಮನಿ, ಮೊದಲಾದವರು ಇದ್ದರು.