ಸಿದ್ದರಾಮಯ್ಯ ಧರ್ಮಗಳನ್ನು ಒಡೆಯುವ ಕೆಲಸ ಮಾಡದಿದ್ದರೇ
ಕೋಲಾರಕ್ಕೆ ಬರುವ ಪರಿಸ್ಥಿತಿ ಇರುತ್ತಿರಲಿಲ್ಲ -ಛಲವಾದಿ ನಾರಾಯಣಸ್ವಾಮಿ

ಕೋಲಾರ, ನ. ೨5- ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೊದಲಿನಿಂದಲೂ ಧರ್ಮ,ಧರ್ಮಗಳ ನಡುವೆ ವಿಷ ಬೀಜ ಭಿತ್ತಿ ಸಂಘಟನೆಗಳನ್ನು ಒಡೆಯುವ ಕೆಲಸ ಮಾಡಿ ಕೊಂಡು ಬಂದಿದ್ದಾರೆ. ಇದರಿಂದಲೇ ಅವರು ಚುನಾವಣೆಯಲ್ಲಿ ಸೋಲನ್ನಾಪ್ಪಲು ಕಾರಣವಾಗಿತ್ತು ಅವರು ಸರಿಯಾಗಿ ರಾಜಕೀಯ ಮಾಡುತ್ತಿದ್ದರೆ ಇಂದು ಕೋಲಾರ ಕ್ಷೇತ್ರಕ್ಕೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅಭಿಪ್ರಾಯ ಪಟ್ಟರು,
ನಗರದ ಜಿಲ್ಲಾ ಯುವಜನ ಒಳಕ್ರೀಡಾಂಗಣದಲ್ಲಿ ಕೊಠಡಿಯನ್ನು ಉದ್ಘಾಟನಾ ಕಾರ್ಯಕ್ರಮದ ನಂತರ ಅವರು ಮಾದ್ಯಮದವರೊಂದಿಗೆ ಮಾತನಾಡಿ ಅವರ ಆಡಳಿತದಲ್ಲಿ ಕೋಲಾರಕ್ಕೆ ಯಾವೂದೇ ಕೊಡುಗೆ ನೀಡಿಲ್ಲ. ಅವರ ಆಡಳಿತದಲ್ಲಿ ಕಾರಗೃಹದಲ್ಲಿದ್ದ ೧೫೦೦ ಮಂದಿ ಅರೋಪಿಗಳನ್ನು ಬಿಡುಗಡೆ ಮಾಡಿದ್ದರು. ಈ ಪೈಕಿ ೧೬೦ ಮಂದಿ ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾದವರನ್ನು ಬಿಡುಗಡೆ ಮಾಡಿರುವ ಹಿನ್ನಲೆಯಲ್ಲಿ ಸಮಾಜ ಘಾತುಕ ಶಕ್ತಿಗಳಿಗೆ ಕುಮ್ಮಕ್ಕು ಸಿಕ್ಕಿದ್ದು ರಾಜ್ಯದಲ್ಲಿ ಹತ್ಯೆ, ಬಾಂಬ್ ಬ್ಲಾಸ್.ಕೋಮು ಗಲಭೆಗಳ ಮೂಲಕ ಅಶಾಂತಿ ವಾತವರಣ ಸೃಷ್ಠಿಗೆ ಕಾರಣವಾಗಿದೆ ಎಂದು ಹೇಳಿದರು,
ಹಿಂದುಗಳಾಗಲಿ, ಆಲ್ಪಸಂಖ್ಯಾತರಾಗಲಿ ಎಲ್ಲರಿಗೂ ಕಾನೂನು ಒಂದೆ ಯಾರೇ ಕಾನೂನು ವಿರೋಧಿ ಚಟುವಟಿಕೆಗಳು ಮಾಡಿದರೂ ತಪ್ಪು ಅದನ್ನು ಯಾರು ಸಹ ಸಮರ್ಥಿಸ ಬಾರದು, ಸಿದ್ದರಾಮಯ್ಯ ಅಂದು ಸಮಾಜ ಘಾತುಕ ಶಕ್ತಿಗಳನ್ನು ಬಿಡುಗಡೆ ಮಾಡದಿದ್ದರೆ ಇಂದು ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯಲು ಅವಕಾಶಗಳು ಇರಲಿಲ್ಲ ಎಂದು ಪ್ರತಿಪಾಧಿಸಿದರು.
ಸಾರ್ವಜನಿಕರು ನನ್ನಿಂದ ಸರ್ಕಾರದ ಕೆಲಸಗಳನ್ನು ಮಾಡಿಸಿ ಕೊಳ್ಳಬಹುದಾಗಿದೆ. ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರು ಸದ್ಬಳಿಸಿ ಕೊಳ್ಳಲು ಅಗತ್ಯವಾದ ಕ್ರಮ ಕೈಗೊಳ್ಳುತ್ತೇನೆ, ಯಾವೂದೇ ಕೆಲಸಗಳು ಕಾನೂನಿನಿಗೆ ಬದ್ದವಾಗಿರ ಬೇಕು,ಸಾರ್ವಜನಿಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗದಂತೆ ಪ್ರತಿಯೊಂದು ಸೌಲಭ್ಯಗಳನ್ನು ಆರ್ಹ ಫಲಾನುಭವಿಗಳು ಪಡೆಯ ಬಹುದಾಗಿದೆ. ಯಾರಿಗೂ ಅನ್ಯಾಯ ಮತ್ತು ವಂಚನೆಗೆ ಒಳಗಾಗದಂತೆ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಲು ಬದ್ದನಾಗಿರುತ್ತೇನೆ ಎಂದು ಹೇಳಿದರು,
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್, ಬಂಗಾರಪೇಟೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ದರಖಾಸ್ತು ಸಮಿತಿ ಸದಸ್ಯ ಬೈಚಪ್ಪ, ಜಿ.ಪಂ. ಮಾಜಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ಕೆ.ಯು.ಡಿ.ಎ. ಅಧ್ಯಕ್ಷ ವಿಜಯಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಗೇರಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್, ನಗರಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಮಾಧ್ಯಮ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ,ಓಹೀಲೇಶ್ ಮುಂತಾದವರು ಉಪಸ್ಥಿತರಿದ್ದರು,