ಸಿದ್ದರಾಮಯ್ಯ ಜನ್ಮೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ಖೇಣಿ

ಬೀದರ:ಜು.24:ದಾವಣಗೆರೆಯಲ್ಲಿ ಅಗಸ್ಟ 3 ರಂದು ನಡೆಯಲಿರುವ ಸಿದ್ದರಾಮಯ್ಯನವರ 75 ನೇ ಹುಟ್ಟು ಹಬ್ಬದ ಅಮೃತ ಮಹೋತ್ಸವದ ಅಂಗವಾಗಿ ಬೀದರ್ ಜಿಲ್ಲಾ ಸಮಿತಿ ವತಿಯಿಂದ ಬೀದರ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಅಶೋಕ್ ಖೇಣಿ ರವರ ಅಧ್ಯಕ್ಷತೆಯಲ್ಲಿ ಎಸ್ ಎಸ್ ಪಾಟೀಲ್ ಫಂಕ್ಷನ್ ಹಾಲ್ ಕಮಠಾಣಾ ದಲ್ಲಿ ಪೂರ್ವಸಿದ್ಧತೆ ಸಭೆ ನಡೆಸಲಾಯಿತು
ಸಭೆಯಲ್ಲಿ ದಕ್ಷಿಣ ಕ್ಷೇತ್ರದ ಮುಖಂಡರು ಸಲಹೆ ಸೂಚನೆ ನೀಡಿದರು
ಬಳಿಕ ಮಾತಾನಾಡಿದ ಅಶೋಕ ಖೇಣಿ ರವರು, ಸಿದ್ದರಾಮಯ್ಯ ಮುಖ್ಯ ಮಂತ್ರಿ ಇರುವ ಸಂದರ್ಭದಲ್ಲಿ ನಾನು ಶಾಸಕನಾಗಿದ್ದೆ ಆ ಸಮಯದಲ್ಲಿ ದಕ್ಷಿಣ ಕ್ಷೇತ್ರದ ಸಾಕಷ್ಟು ಅನುದಾನ ಕೊಟ್ಟಿದಾರೆ ಅವರ ಹುಟ್ಟು ಹಬ್ಬದ ದಾವಣಗೆರೆಯಲ್ಲಿ ಆಚರಣೆ ಮಾಡುತ್ತಿದ್ದು ದಕ್ಷಿಣ ಕ್ಷೇತ್ರದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆದುಕೊಂಡು ಹೊಗುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಮಿನಾಕ್ಷಿ ಸಂಗ್ರಾಮ, ಸಮಿತಿ ಅಧ್ಯಕ್ಷರಾದ ಅಮ್ರತರಾವ ಚಿಮಕೋಡ, ಬ್ಲಾಕ್ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದ ಚಂದ್ರಶೇಖರ ಚನಶಟ್ಟಿ, ಕರೀಮ ಸಾಬ
ಕಾರ್ಯಧ್ಯಕ್ಷರಾದ ಮಲ್ಲಿಕಾರ್ಜುನ ಬಿರಾದಾರ ಪರಿಹಾರ ಸಂಚಾಲಕರಾದ ಬಸವರಾಜ್ ಮಾಳಗೆ ಉಪಾಧ್ಯಕ್ಷರಾದ ಗೋವರ್ಧನ ರಾಠೋಡ ತುಕಾರಾಮ ಚಿಮಕೋಡೆ , ಲೇಬರ ಸೇಲ್ ಜಿಲ್ಲಾಧ್ಯಕ್ಷರಾದ ರಮೇಶ ಕಮಠಾಣ, ಗ್ರಾಮ ಪಂಚಾಯಿತಿಯ ಸದಸ್ಯರಾದ ಖಾಲೇದ್ , ಮುಖಂಡರಾದ ಖಮರ್, ಗೌಸೋದ್ದಿನ್ ,ರಾಜ್ ಅಹ್ಮದ್, ಓಂಕಾರ ಕೊಡ್ಡಿ, ಪ್ರಶಾಂತ ಜೈನ ,ರಾಜು ಗಾದಗಿ, ಸಂಜೂ, ಬಾಬುರಾವ ,ಅನೀಲಕುಮಾರ,ಗಣಪತಿ, ಪ್ರಕಾಶ, ರಾಜು ನರಸಪ್ಪ ಹಾಗು ದಕ್ಷಿಣ ಕ್ಷೇತ್ರದ ಮುಂಚೂಣಿ ಘಟಕದ ಅಧ್ಯಕ್ಷರು ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.