ಸಿದ್ದರಾಮಯ್ಯ, ಗಣೇಶ್ ಗೆ ಅಧಿಕಾರ ಸಿಗಲೆಂದು ಹರಕೆ


ಸಂಜೆವಾಣಿ ವಾರ್ತೆ
ಕುರುಗೋಡು:ಮೇ.19: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲೆಂದು ಮತ್ತು ಕಂಪ್ಲಿ ಕ್ಷೇತ್ರದಲ್ಲಿ ಶಾಸಕ ಜೆ.ಎನ್ ಗಣೇಶ್ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಲೆಂದು ಕೆಲ ದಿನಗಳ ಹಿಂದೆ ಹರಕೆ ಹೊತ್ತಿದ್ದೆವು ಅವರು ಆಯ್ಕೆಯಾದರೆ ಕಾಲ್ನಡಿಗೆಯಲ್ಲಿ(ಪಾದಯಾತ್ರೆ) ಗುಳ್ಯಂನ ಪವಾಡ ಪುರುಷ ಗಾದಿಲಿಂಗಪ್ಪ ತಾತನ ದೇವಾಲಯದವರೆಗೆ ಬರುವುದಾಗಿ ಹರಕೆ ಹೊತ್ತಿದ್ದೆವು ಅಂತೆಯೇ ರಾಜ್ಯದಲ್ಲಿ ಎರಡನೇ ನೇ ಬಾರಿಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ , ಕಂಪ್ಲಿ ಕ್ಷೇತ್ರದಲ್ಲಿ ಎರಡನೇ ನೇ ಬಾರಿ ಶಾಸಕರಾಗಿ ಜೆ.ಎನ್ ಗಣೇಶ್ ಆಯ್ಕೆಯಾಗಿದ್ದು ಇಂದು ಹರಕೆ ತೀರಿಸಿದ್ದೇವೆ ಎಂದು ಕುರುಗೋಡಿನ ಸಿದ್ದರಾಮಯ್ಯ ಹಾಗೂ ಗಣೇಶ್ ಅಭಿಮಾನಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡ ಬಾಗೋಡಿ ನಾಗರಾಜ್ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಬಿಜೆಪಿ ಸರ್ಕಾರದ ಪತನದೊಂದಿಗೆ ರಾಜ್ಯದಲ್ಲಿ ಗ್ಯಾರಂಟಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ  ಸುಭದ್ರ ಸರ್ಕಾರ ನೀಡುವ ಭರವಸೆಯಿದೆ, ಕಾಂಗ್ರೆಸ್ ಸರ್ಕಾರದಲ್ಲಿ ಗಣೇಶಣ್ಣನಿಗೆ ಸಚಿವ ಸ್ಥಾನ ಸಿಗಬೇಕು ಎಂದು ದೇವರನ್ನು ಬೇಡಿಕೊಂಡೆವು ಎಂದು ತಿಳಿಸಿದರು.
ಕುರುಗೋಡುನಿಂದ ಬೈಲೂರು, ಚಾನಾಳ್ ,ಹಡ್ಲಿಗಿ, ಬಸರಕೋಡು ಮಾರ್ಗವಾಗಿ ಗುಳ್ಯಂ ತಲುಪಿದೆವು ನಂತರ ಗಾದಿಲಿಂಗೇಶ್ವರನಿಗೆ ಜೋಡಿ ಕಾಯಿ ಒಡೆಸುವ ಮೂಲಕ ಇಬ್ಬರು ನಾಯಕರಿಗೂ ಆಯುಷ್ಯ, ಆರೋಗ್ಯ, ಸಂಪತ್ತು ಕರುಣಿಸಲಿ ಎಂದು ಬೇಡಿಕೊಂಡೆವು ಎಂದರು.
ಈ ಸಂದರ್ಭದಲ್ಲಿ ಇವರ ಗೆಳೆಯ ಹಾವಣ್ಣನವರ ಚನ್ನಬಸವ ಸಹ ಹರಕೆ ತೀರಿಸಿದರು ಎಂದರು.