ಸಿದ್ದರಾಮಯ್ಯ ಐಟಿಐ: ಮುಖ್ಯಮಂತ್ರಿ ಜನ್ಮದಿನ ಆಚರಣೆ

ಬೀದರ್:ಆ.4: ನಗರದ ಸಿದ್ದರಾಮಯ್ಯ ಐಟಿಐನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನ ಆಚರಿಸಲಾಯಿತು.
ಅಹಿಲ್ಯಾಬಾಯಿ ಮಹಿಳಾ ವಿಕಾಸ ಕಾರ್ಯ ಸಮಿತಿಯ ಅಧ್ಯಕ್ಷೆ ಗೀತಾ ಚಿದ್ರಿ ಹಾಗೂ ಕಾರ್ಯದರ್ಶಿ ಪಂಡಿತರಾವ್ ಚಿದ್ರಿ ಅವರು ಜಂಟಿಯಾಗಿ ಕೇಕ್ ಕತ್ತರಿಸಿದರು.
ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿಯಾಗಿ ಹತ್ತು ಹಲವು ಯೋಜನೆಗಳ ಮೂಲಕ ಬಡವರು, ಶೋಷಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಸೇರಿದಂತೆ ಸರ್ವ ಸಮುದಾಯಗಳ ಏಳಿಗೆಗೆ ಶ್ರಮಿಸಿದ್ದಾರೆ. ಈಗ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೆರವಾಗಿದ್ದಾರೆ ಎಂದು ಪಂಡಿತರಾವ್ ಚಿದ್ರಿ ಹೇಳಿದರು.
ಸಿದ್ದರಾಮಯ್ಯ ಅವರ ಅಧಿಕಾರ ಅವಧಿಯಲ್ಲಿ ರಾಜ್ಯ ಅಭಿವೃದ್ಧಿಯಲ್ಲಿ ದೇಶದಲ್ಲೇ ನಂಬರ್ ಒನ್ ಆಗಲಿದೆ ಎಂದು ಗೀತಾ ಚಿದ್ರಿ ನುಡಿದರು.ಪ್ರಾಚಾರ್ಯ ನಾಗಪ್ಪ ಮಡಿವಾಳ, ಕಿರಿಯ ತರಬೇತಿ ಅಧಿಕಾರಿಗಳಾದ ಮಸುಲೊದ್ದಿನ್, ಮಹಾದೇವಿ ಇದ್ದರು.