ಮೈಸೂರು: ಏ.28:- ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧಿಸಿರುವ ವರುಣ ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚಾಗಿದ್ದು, ಸ್ವತಃ ಸಿದ್ದರಾಮನಹುಂಡಿ ಗ್ರಾಮದಲ್ಲೇ ಬಿಜೆಪಿ ಪ್ರಚಾರಕ್ಕೆ ಕೆಲವರು ಅಡ್ಡಿ ಪಡಿಸಿದ್ದು, ಈ ವೇಳೆ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನಿಸಿ ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ. ಮಾತ್ರವಲ್ಲದೆ, ಘಟನೆ ಬಳಿಕವೂ ಪ್ರಚಾರ ಮುಂದುವರೆಸಿದ ಸಂಸದ ಪ್ರತಾಪಸಿಂಹ ಪುಂಡಾಟಿಕೆಗೆ ಬಗ್ಗಲ್ಲ ಎಂದು ಕಿಡಿಕಾರಿದ್ದಾರೆ.
ಪೂರ್ವನಿಗದಿಯಂತೆ ಸಿದ್ದರಾಮನಹುಂಡಿ ಗ್ರಾಮ ಪ್ರವೇಶಿಸಿದ ಸೋಮಣ್ಣ ಅವರಿದ್ದ ವಾಹನ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅಣ್ಣನ ಮನೆ ಸಮೀಪ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಬೆಂಬಲಿತ ಯುವಕರ ಗುಂಪೆÇಂದು ಸಿದ್ದರಾಮಯ್ಯ ಪರ ಘೋಷಣೆ ಕೂಗಿದೆ. ಈ ವೇಳೆ ಮತ್ತೊಂದು ಯುವಕರ ತಂಡ ಬಿಜೆಪಿ ಅಭ್ಯರ್ಥಿ ಸೋಮಣ್ಣ ಪರ ಘೋಷಣೆ ಕೂಗಿದೆ.
ಈ ವೇಳೆ ಎರಡೂ ಗುಂಪುಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆಯಲ್ಲದೆ, ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರಿದೆ. ಈ ಸಂದರ್ಭ ಸಿದ್ದರಾಮಯ್ಯ ಅವರ ಅಣ್ಣನ ಕುಟುಂಬದವರು ಹಾಗೂ ಸಂಬಂಧಿಕರು ಎನ್ನಲಾದ ಕೆಲವರು ಗ್ರಾಮದ ನಾಗೇಶ್ ಎಂಬಾತನ ಮೇಲೆ ತೀವ್ರತರವಾದ ಹಲ್ಲೆ ಮಾಡಿದ್ದಾರೆ.
ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಕಂಡ ಸ್ಥಳದಲ್ಲಿದ್ದ ಪೆÇಲೀಸರು ಕೂಡಲೇ ಮಧ್ಯೆ ಪ್ರವೇಶಿಸಿ ಎರಡೂ ಗುಂಪುಗಳನ್ನು ಚದುರಿಸಿ ಪರಿಸ್ಥಿತಿ ತಿಳಿಯಾಗಿಸಿದ್ದಾರೆ. ನಂತರ ಪೆÇಲೀಸ್ ಬಂದೋಬಸ್ತ್ ನಲ್ಲಿ ಬಿಜೆಪಿ ಪ್ರಚಾರ ವಾಹನ ಮುಂದೆ ಸಾಗಿದೆ.
ಘಟನೆಯಿಂದ ನಾಗೇಶ್ ಅವರ ಕಾಲು ಮುರಿದಿದೆ ಎಂದು ಹೇಳಲಾಗಿದ್ದು, ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಎರಡೂ ಕಡೆಯ ಪರಸ್ಪರ ದೂರು ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದಾದ ಬಳಿಕವೂ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪಸಿಂಹ ಪ್ರಚಾರ ಮುಂದುವರೆಸಿದ್ದಾರೆ. ಮಾತ್ರವಲ್ಲದೆ, ಸಂಸದ ಪ್ರತಾಪಸಿಂಹ ಮಾತನಾಡಿ, ಯಾರೇ ಬೇರೆ ಪಕ್ಷದವರು ಪ್ರಚಾರಕ್ಕೆ ಬಂದರೂ ತಡಿಯಬೇಕೆಂದು ಕೊಂಡರೆ ಊರನ್ನೇ ತಡೆಯುವ ಶಕ್ತಿ ನಮಗಿದೆ. ಆದರೆ, ನಾವು ಅಂಬೇಡ್ಕರ್ ಬರೆದಿರುವ ಸಂವಿಧಾನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿದ್ದೇವೆ. ಜನರ ಬಳಿಗೆ ಹೋಗಿ ಆಶೀರ್ವಾದ ಕೇಳುತ್ತಿದ್ದೇವೆ. ಪುಂಡಾಟಿಕೆ ಮಾಡಿಲ್ಲ. ಹಾಗೇ ಮಾಡಬೇಕೆಂದಿದ್ದರೆ ನಮಗೂ ಬರುತ್ತೇ, ನಮ ಹತ್ತಿರವೂ ಶಕ್ತಿಯಿದೆ ಎಂದರು.
ಯಾರ್ಯಾರು ಪುಂಡಾಟಿಕೆ ಮಾಡಲು ಯತ್ನಿಸಿದ್ದಾರೆ. ನಿಮ್ಮ ಊರಿಗೆ ಒಬ್ಬನೇ ಬರುತ್ತೇನೆ, ಪುಂಡಾಟೀಕೆ ಮಾಡಿ ನೋಡುತ್ತೇನೆ. ಈ ಊರಲ್ಲೂ ಪಕ್ಷದ ಅಭಿಮಾನಿಗಳಿದ್ದಾರೆ, ವಿ.ಸೋಮಣ್ಣರ ಅಭಿಮಾನಿಗಳಿದ್ದಾರೆ. ದಯವಿಟ್ಟು ಪುಂಡಾಟಿಕೆ ಮಾಡುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಪುಂಡಾಟಿಕೆ ಮಾಡುವ ಶಕ್ತಿ ನಮಗಿದೆ. 15 ವರ್ಷದಿಂದ ಒಳ್ಳೆ ಅಭ್ಯರ್ಥಿ ಕೊಡಿ ಎಂದು ಕೇಳುತ್ತಿದ್ದೇವು. ಈ ಬಾರಿ ಒಳ್ಳೆ ಅಭ್ಯರ್ಥಿ ಕೊಟ್ಟಿದ್ದಾರೆ. ಹೀಗಾಗಿ ಈ ಬಾರಿ ವರುಣದಲ್ಲೂ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿಕೊಡಿ ಎಂದು ರಾತ್ರಿಯೂ ಅಬ್ಬರದ ಪ್ರಚಾರ ನಡೆಸಿದ್ದಾರೆ.