ಸಿದ್ದರಾಮಯ್ಯ ಆಡಳಿತ ತಾಳತಪ್ಪಿದೆ

ಕೋಲಾರ,ನ,೬- ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ವೀರ ಮಕ್ಕಳ ಕುಣಿತದಲ್ಲಿ ತಾಳಕ್ಕೆ ತಪ್ಪದಂತೆ ಹೆಜ್ಜೆ ಹಾಕಿದ್ದರೂ ಸಹ ಕಾಂಗ್ರೇಸ್ ಸರ್ಕರದ ಆಡಳಿತದಲ್ಲಿ ತಾಳ ತಪ್ಪಿದ ಹೆಚ್ಚೆಗಳನ್ನು ಹಾಕುವ ಮೂಲಕ ಹಳಿ ತಪ್ಪಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.
ನಗರದ ಪ್ರವಾಸ ಮಂದಿರದಲ್ಲಿ ಬರ ಅಧ್ಯಾಯನದ ಜಿಲ್ಲಾ ಪ್ರವಾಸದ ನಂತರ ಭಾನುವಾರ ಸಂಜೆ ಮಾದ್ಯಮದವರೊಂದಿಗೆ ಅವರು ಮಾತನಾಡಿ ನ೩ ರಿಂದ ರಾಜ್ಯದಲ್ಲಿ ಬಿಜೆಪಿ ಪಕ್ಷವು ೧೮ ತಂಡಗಳು ಅಧ್ಯಕ್ಷ ನಳಿನ್ ಕಟೀಲ್,ಮಾಜಿ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತ್ರತ್ವದಲ್ಲಿ ಪ್ರವಾಸವನ್ನು ಕೈಗೊಂಡಿದ್ದು ಬರಗಾಲ ಸಂದಿಸಿ ನೆರವಾಗಿರವ ಕುರಿತು ನೊಂದ ರೈತರಿಂದಲೇ ಮಾಹಿತಿ ಪಡೆದು ವರದಿಯನ್ನು ರಾಜ್ಯಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ರಾಜ್ಯದ ೨೨೪ ತಾಲ್ಲೂಕುಗಳಲ್ಲಿ ಬರಪೀಡಿತ ಗಂಬೀರತೆಯ ಅರಿವು ಇಲ್ಲದೆ ರೈತರ ನೆರವಿಗೆ ಯಾವೂದೇ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡದೆ ನಿರ್ಲಕ್ಷಿಸಿರುವುದು ಸ್ವಷ್ಟವಾಗಿದೆ. ಜಾನಪದ ವೀರ ಮಕ್ಕಳ ಕುಣಿತದಲ್ಲಿ ತಾಳತಪ್ಪದಂತೆ ಹೆಜ್ಜೆ ಹಾಕಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಆಡಳಿತ ನಿರ್ವಹಣೆಯಲ್ಲೂ ತಾಳ ತಪ್ಪದಂತೆ ನಿರ್ವಹಿಸುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದ್ದು ಆಡಳಿತದಲ್ಲಿ ತಾಳ ತಪ್ಪಿದ ಹಳಿಯಲ್ಲಿ ಸಾಗುತ್ತಿರುವುದು ಎಂದು ದೂರಿದರು.
ಬಿಜೆಪಿ ಸರ್ಕಾರದಲ್ಲಿ ೩ ಫೆಸ್ ವಿದ್ಯುತ್ ಪೂರೈಕೆಯಲ್ಲಿ ಯಾವೂದೇ ಸಮಸ್ಯೆಗಳು ಕಂಡು ಬಂದಿರಲಿಲ್ಲ. ಅದರೆ ಕಾಂಗ್ರೇಸ್ ಸರ್ಕಾರ ೩ ಫೆಸ್ ವಿದ್ಯುತ್ ೭ ಗಂಟೆ ನೀಡುವುದಾಗಿ ಭರಸೆ ನೀಡಿ ಕನಿಷ್ಟ ೫ ಗಂಟೆ ವಿದ್ಯುತ್ ಸಹ ನೀಡದೆ ರೈತರ ಬೆಳೆಗಳು ನೀರಿಲ್ಲದೆ ಬಣಗೊಡುತ್ತಿದೆ. ಶೇ ೫೦ ಕ್ಕಿಂತ ಕಡಿಮೆ ವಾಡಿಕೆ ಮಳೆಯಾಗಿದೆ. ಕೆರೆ ಕಟ್ಟೆಗಳು, ಅಣೆಕಟ್ಟುಗಳು ಖಾಲಿ,ಖಾಲಿಯಾಗಿದೆ. ನೆವೆಂಬರ್‌ನಲ್ಲಿ ಈ ರೀತಿ ಅನುಭವ ಅದರೆ ಮುಂದಿನ ಮಾರ್ಚ್, ಏಪ್ರಿಲ್ ವೇಳೆಗೆ ರಾಜ್ಯದ ಸ್ಥಿತಿ ಗತಿಗಳು ಊಹಿಸಿ ಕೊಂಡರೆ ಭಯವಾಗುತ್ತದೆ ಎಂದು ಕಳವಳ ವ್ಯಕ್ತ ಪಡೆಸಿದರು,
ಕಾಂಗ್ರೆಸ್ ಪಕ್ಷಕ್ಕೆ ೧೩೫ ಮಂದಿ ಶಾಸಕರ ಬಹುಮತ ಇದ್ದರೂ ಕುರ್ಜಿ ಉಳಿಸಿ ಕೊಳ್ಳುವ ಹಾಗೂ ಪಂಚ ರಾಜ್ಯದ ಚುನಾವಣೆಗಾಗಿ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಸಲ್ಲಿಸಲು ರಾಜ್ಯದಲ್ಲಿ ಯಾವ ರೀತಿ ಹಣ ಸಂಗ್ರಹಿಸ ಬೇಕೆಂಬ ಸಭೆಗಳನ್ನು ನಡೆಸಲಾಗುತ್ತಿದೆ. ಬರ ಪರಿಹಾರಕ್ಕೆ ಸರ್ಕಾರವು ೩೨೪ ಕೋಟಿ ರೂ ಬಿಡುಗಡೆಗೆ ಆದೇಶ ಜಾರಿ ಮಾಡಿದ್ದರೈ ಸಹ ರಾಜ್ಯ ಸರ್ಕಾರ ೧ ರೋ ಸಹ ಬಿಡುಗಡೆ ಮಾಡದೆ ಒಂದು ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದೆ ಮಾತುಮಾತಿಗೂ ಕೇಂದ್ರದ ಕಡೆ ಬೊಟ್ಟು ಮಾಡುತ್ತಾ ಸಾರ್ವಜನಿಕರನ್ನು ದಿಕ್ಕು ತಪ್ಪಿಸುತ್ತಿದೆ ರೈತರಿಗೆ ವಿಶ್ವಾಸ ತುಂಭುವ ಕೆಲಸವನ್ನು ಮಾಡುತ್ತಿಲ್ಲ, ರಾಜ್ಯದ ಖಜಾನೆ ಕೀಯನ್ನು ಕಾಂಗ್ರೇಸ್ ವೀಕ್ಷಕರಾದ ವೇಣುಗೋಪಾಲ್ ಹಾಗೂ ಸುರ್ಜಿತ್‌ವಾಲ ಕೈಗೆ ನೀಡಿದ್ದಾರೆ ಎಂದು ಅರೋಪಿಸಿದರು.
ಮುಂಬರಲಿರುವ ೨೦೨೮ರ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವುದ ಖಚಿತವಾಗಿ ಕಾಂಗ್ರೇಸ್ ಅಧಿಕಾರಕ್ಕೆ ತಂದ ಜನತೆ ಇಂದು ಪಶ್ಚಾತಪ ಪಡುವಂತಾಗಿದೆ. ನಾವ್ಯಾರು ಮುಖ್ಯ ಮಂತ್ರಿಗಳ ಕುರ್ಜಿ ಮೇಲೆ ಕಣ್ಣಿಟ್ಟಿಲ್ಲ ಎಂದಯ ಸ್ವಷ್ಟ ಪಡೆಸಿದರು,
ಅರಣ್ಯ ಇಲಾಖೆ ದೌರ್ಜನ್ಯದ ಪರಮಾವಧಿ-
ಪತ್ರಿಕಾ ಗೋಷ್ಟಿಯ್ಲಿ ಸಂಸದ ಎಸ್.ಮುನಿಸ್ವಾಮಿ ಜಿಲ್ಲಾ ಅಡಳಿತದ ವೈಪಲ್ಯತೆಗಳ ಕುರಿತು ಅರೋಪಿಸಿದರು. ವಿಧಾನ ಪರಿಷರ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ಸಂಪಂಗಿ, ಜಿಲ್ಲಾ ಬಿಜೆಪಿ ಅಧ್ಯಕ ಡಾ.ವೇಣುಗೋಪಾಲ್ ಮುಂತಾದವರು ಇದ್ದರು.