ಸಿದ್ದರಾಮಯ್ಯ ಅವರ 75 ನೇ ಹುಟ್ಟುಹಬ್ಬ ಆಚರಣೆ ಪಾಲ್ಗೊಳಲು ಮನವಿ

ಅಫಜಲಪುರ: ಜು.18:ರಾಜ್ಯ ಕಂಡ ಅಪರೂಪದ ರಾಜಕಾರಣಿ ವಿರೋಧ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಹಿನ್ನಲೆ ದಾವಣಗೇರೆ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮಕ್ಕೆ ತಾಲೂಕಿನಿಂದ ಅಂದಾಜು 10 ಸಾವಿರ ಅಭಿಮಾನಿ ಹಿತೈಷಿಗಳು ಪಾಲ್ಗೊಳ್ಳÀಲಿದ್ದಾರೆ ಎಂದು ಮುಖಂಡರಾದ ಮಕ್ಬೂಲ್ ಪಟೇಲ್, ಮಹಾಂತೇಶ ಕವಲಗಿ ತಿಳಿಸಿದರು.

ಅಫಜಲಪುರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ನಡೆಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ 5 ವರ್ಷಗಳ ಪೂರ್ಣಾವಧಿ ಮುಖ್ಯಮಂತ್ರಿ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಸರ್ವ ಜನಾಂಗದವರಿಗೆ ಸಹಕಾರಿಯಾಗುವ ಯೋಜನೆಗಳು ಜಾರಿ ಮಾಡಿ ಎಲ್ಲರಿಗೂ ಆಸರೆಯಾಗುವ ನಿಟ್ಟಿನಲ್ಲಿ ಜನಪರ ಆಡಳಿತ ನಡೆಸಿದ್ದರು ಆ ಮೂಲಕ ಅವರು ಬಡ ಕುಟುಂಬಸ್ಥರಿಗೆ ಅನುಕೂಲ ನೀಡಿದ್ದರು. ಅಗಷ್ಟ 3ರಂದು ದಾವಣಗೆರೆಯಲ್ಲಿ ರಾಜ್ಯದ ಮೂಲೆ ಮೂಲೆಯಲ್ಲಿರುವ ಅಭಿಮಾನಿಗಳು ಸೇರಿಕೊಂಡು ಅವರ 75ನೇ ಹುಟ್ಟುಹಬ್ಬವನ್ನು ಆಚರಿಸಬೇಕೆನ್ನುವ ಹಿನ್ನಲ್ಲೆ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಅಂದು ನಡೆಯುವ ಕಾರ್ಯಕ್ರಮದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಿರಿಯರು ಹಿತೈಷಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಜೆ.ಎಂ ಕೊರಬು, ಲಚ್ಚಪ್ಪ ಜಮಾದಾರ ಮಾತನಾಡಿ ಕಾರ್ಯಕ್ರಮಕ್ಕೆ ಅಫಜಲಪುರದಿಂದ ತೆರಳುವವರಿಗೆ ಬಸ್ಸು, ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿದ್ದು ಈ ಕುರಿತು ಪಟ್ಟಣದ ಕನಕಶ್ರೀ ಮಿಲಿಟರಿ ತರಬೇತಿ ಕೇಂದ್ರದಲ್ಲಿ ಎಲ್ಲಾ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿದ್ದೇವೆ. ಸುಮಾರು 15 ಕ್ಕೂ ಹೆಚ್ಚು ಬಸ್ಸುಗಳು ಅಫಜಲಪುರ ತಾಲೂಕಿನಿಂದ ಕಾರ್ಯಕ್ರಮಕ್ಕೆ ತೆರಳಲಿವೆ. ಅಲ್ಲದೆ ಅನೇಕರು ತಮ್ಮ ಸ್ವಂತ ವಾಹನಗಳಲ್ಲಿಯೂ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಒಟ್ಟಿನಲ್ಲಿ ತಾಲೂಕಿನಿಂದ 10 ಸಾವಿರಕ್ಕೂ ಹೆಚ್ಚಿನ ಜನ ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಭೀಮಶಾ ಖನ್ನಾ, ದೇವಿಂದ್ರಪ್ಪ ಮರತೂರ, ಮಲ್ಲಿಕಾರ್ಜುನ ಪೂಜಾರಿ, ರವಿ ಗೌರ, ಬಿ.ಎಂ ರಾವ್, ಸಿದ್ದಪ್ಪ ಪೈಲ್ವಾನ್ ಸೇರಿದಂತೆ ಅನೇಕರು ಇದ್ದರು.