ಸಿದ್ದರಾಮಯ್ಯ ಅಮೃತ ಮಹೋತ್ಸವ ಸ್ಥಳ ಪರಿಶೀಲಿಸಿದ ಸಲೀಂ ಅಹ್ಮದ್ 

ದಾವಣಗೆರೆ: ಆಗಸ್ಟ್ 3 ರಂದು ಮಾಜಿ ಮಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಜನ್ಮ ದಿನಾಚರಣೆ ಅಂಗವಾಗಿ ದಾವಣಗೆರೆ ಮಹಾನಗರದಲ್ಲಿ ಹಮ್ಮಿಕೊಂಡಿರುವ ಅಮೃತ ಮಹೋತ್ಸವ ಸ್ಥಳವಾದ ನಗರದ ಬೈಪಾಸ್ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಪೂರ್ವ ಸಿದ್ದತೆಯನ್ನು ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ರವರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಗಳೂರಿನ ಮಾಜಿ ಶಾಸಕರಾದ ಹೆಚ್.ಪಿ. ರಾಜೇಶ್, ಕೆ.ಪಿ.ಸಿ.ಸಿ. ವಕ್ತಾರರಾದ ಡಿ. ಬಸವರಾಜ್, ಇಟ್ಟಿಗುಂಡಿ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಎಸ್.ಎಂ. ಜಯಪ್ರಕಾಶ್, ಭೈರೇಶ್, ದಯಾನಂದ್ ಹಂಚಿನಮನೆ, ಷಣ್ಮುಖಪ್ಪ, ಟಿ.ವಿ. ಗಿರಿಧರ್, ಬಾಡದ ರವಿ, ಜಯಣ್ಣ, ಅರವಿಂದ್, ಗೋಣೆಪ್ಪ ಲಿಂಗರಾಜು ಸೇರಿದಂತೆ ಅನೇಕರು ಹಾಜರಿದ್ದು ಮಾಹಿತಿ ನೀಡಿದರು. 

Attachments area