ಸಿದ್ದರಾಮಯ್ಯ ಅಮೃತಮಹೋತ್ಸವ; ಯೂತ್ ಕಾಂಗ್ರೆಸ್ ನಿಂದ ವಿವಿಧ ಕಾರ್ಯಕ್ರಮ

ದಾವಣಗೆರೆ. ಜು.೨೭; ದಾವಣಗೆರೆಯಲ್ಲಿ ಆ.೩ ರಂದು ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಮೃತಮಹೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಯೂತ್ ಕಾಂಗ್ರೆಸ್ ನಿಂದ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿಖಿಲ್ ಕೊಂಡಜ್ಜಿ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಾವಣಗೆರೆ ಯೂತ್ ಕಾಂಗ್ರೆಸ್ ನಲ್ಲಿ ೧೪ ಬ್ಲಾಕ್ ಗಳಿದ್ದು ಎಲ್ಲಾ ಬ್ಲಾಕ್ ಗಳಿಂದ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ಅಮೃತಮಹೋತ್ಸವಕ್ಕೆ ಕರೆತರುವಂತೆ ಮಾಡಲಾಗುತ್ತಿದೆ.ಈಗಾಗಲೇ ಕಾಂಗ್ರೆಸ್ ಪಕ್ಷ ಹಾಗೂ ಅಭಿಮಾನಿಗಳ ಬಳಗದಿಂದ ಸಕಲಸಿದ್ದತೆ ಕೈಗೊಳ್ಳಲಾಗಿದೆ.ಅದೇ ರೀತಿ ಯೂತ್ ಕಾಂಗ್ರೆಸ್ ನಿಂದಲೂ ಸಿದ್ದತೆ ಕೈಗೊಳ್ಳಲಾಗಿದೆ.ಇಂದಿನಿಂದ ಐದು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಇಂದು ಮಧ್ಯಾಹ್ನ ಹರಿಹರದ ಗುತ್ತೂರಿನಲ್ಲಿರುವ ವೃದ್ದಾಶ್ರಮದಲ್ಲಿ ಹಣ್ಣುಗಳ ವಿತರಣೆ ಮಾಡಲಾಗುವುದು.ನಾಳೆ ಮಾಯಕೊಂಡದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಸನ್ಮಾನ ಕೈಗೊಳ್ಳಲಾಗಿದೆ.ಹೊನ್ನಾಳಿಯಲ್ಲಿ ಅಂಧಹಾಡುಗಾರರಿಂದ ಕೇಕ್ ಕತ್ತರಿಸಿ ಸಿದ್ದರಾಮಯ್ಯ ಅವರ ಜನ್ಮದಿನ ಆಚರಿಸಲಾಗುವುದು ಹಾಗೂ ಜಗಳೂರು ಹಾಗೂ ಚನ್ನಗಿರಿಯಲ್ಲಿ ಸಸಿಗಳನ್ನು ನೆಡುವುದು ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ನಗರ ಸಮೀಪದ ತುರ್ಚಘಟ್ಟದ ಆಶ್ರಮದಲ್ಲಿ ಹಾಗೂ ಜೆಜೆಎಂ ಆಸ್ಪತ್ರೆಯಲ್ಲಿ ಹಣ್ಣು ಬ್ರೆಡ್ ವಿತರಣೆ ಮಾಡಲಿದ್ದೇವೆ ಒಟ್ಟಿನಲ್ಲಿ ಸಿದ್ದರಾಮಯ್ಯ ಅವರ ಅಮೃತಮಹೋತ್ಸವ ಕಾರ್ಯಕ್ರಮವನ್ನು ಯೂತ್ ಕಾಂಗ್ರೆಸ್ ನಿಂದ ದಾವಣಗೆರೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ ಗೌಡ,ರಂಜಿತ್,ನವೀನ್ ನಲವಾಡಿ,ಮೆಹಬೂಬ್ ಬಾಷಾ,ಹಾಲೇಶ್ ಇದ್ದರು.

Attachments area