ಸಿದ್ದರಾಮಯ್ಯ ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮೈಸೂರು: ಮೇ.20:- ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಬೃಹತ್ ಎಲ್‍ಇಡಿ ಪರದೆ ಹಾಗೂ ಪಟಾಕಿ ಸಿಡಿಸಿ, ಮೈಸೂರು ಪಾಕ್ ಬಾದಾಮಿ ಹಾಲು ವಿತರಿಸಿ ಸಂಭ್ರಮಿಸಿದರು.
ಸಿದ್ದರಾಮಯ ಸಿಎಂ ಡಿ ಕೆ ಶಿವಕುಮಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮೈಸೂರಿನಲ್ಲಿ ಟಿವಿ ಮೂಲಕ ಕಾರ್ಯಕ್ರಮ ವೀಕ್ಷಣೆ ಮೈಸೂರಿನ ನಂಜುಮಳಿಗೆಯಲ್ಲಿ ಬೃಹತ್ ಎಲ್‍ಇಡಿ ವ್ಯವಸ್ಥೆ ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಕೃಷ್ಣರಾಜ ಯುವ ಬಳಗ ವತಿಯಿಂದ ಮೈಸೂರು ಸಿದ್ದರಾಮಯ್ಯ ಅಭಿಮಾನಿ ಬಸವರಾಜ್ ಬಸಪ್ಪ ರವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ವ್ಯವಸ್ಥೆ ,ಪಟಾಕಿ ಸಿಡಿಸಿ ಮೈಸೂರು ಪಾಕ್ ಸಿಹಿ ಹಾಗೂ ಸಾರ್ವಜನಿಕರಿಗೆ ಬಾದಾಮಿ ಹಾಲು ವಿತರಿಸುವ ಮೂಲಕ ಸಂಭ್ರಮಿಸಿದರು.
ಮೈಸೂರಿನ ಹುಲಿ ಸಿದ್ದರಾಮಯ್ಯರವರಿಗೆ ಜೈಕಾರ ಕೂಗಿ ಸಂಭ್ರಮಿಸಿದರು
ಬಲಿಕ ಮಾಧ್ಯಮದ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ ಅಭಿಮಾನಿ ಬಸವರಾಜ್ ಬಸಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗ ಸರಣಿ ಭಾಗ್ಯ ಕಾರ್ಯಕ್ರಮ ಮೂಲಕ ಹೊಸ ಇತಿಹಾಸ ಸೃಷ್ಟಿಗೆ ಕಾರಣವಾಗಿದ್ದರು, ಈ ಮೂಲಕ 5 ವರ್ಷಗಳ ಅಧಿಕಾರ ಚಲಾಯಿಸಿ ಅಪರೂಪದ ವಿದ್ಯಮಾನಕ್ಕೆ ಕಾರಣವಾಗಿದ್ದರು, ಹಲವಾರು ಸವಾಲುಗಳ ನಡುವೆಯೂ ತನ್ನ ಸಾಮಥ್ರ್ಯ ನಾಯಕತ್ವ , ಶಾಸಕರ ಸಂಖ್ಯೆ ಬಲದ ಬೆಂಬಲ, ಹೈಕಮಾಂಡ್ ನ ಒಲವಿನ ಮುಖೇನ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯ ಯೋಗ ಒದಗಿ ಬಂದಿದೆ, ಈಗ ಜನರ ನಿರೀಕ್ಷೆ ನಂಬಿಕೆ ಉಸಿಗೊಳಿಸದೆ ಸಮರ್ಥ ಆಡಳಿತ ನೀಡುವ ವಿಶ್ವಾಸ ನಮ್ಮಲ್ಲಿದೆ, ಸ್ಪಷ್ಟ ಜನಾದೇಶ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಜನಪ್ರಿಯ ಜನ ಮನ್ನಣೆಯ ಐದು ವರ್ಷಗಳ ಸುಸ್ಥಿರ ಆಡಳಿತ ನೀಡುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ತೀರ್ಥ ಕುಮಾರ್, ಮಂಜುನಾಥ್, ಮಂಜಪ್ಪ , ನವೀನ್ ಕೆಂಪಿ, ಶಿವಕುಮಾರ್, ಪ್ರೇಮ್ ಕುಮಾರ್, ಶ್ರೀನಿವಾಸ್, ಎಸ್ ಎನ್ ರಾಜೇಶ್, ರಾಕೇಶ್, ಪಾಂಡು, ಹಾಗೂ ಇನ್ನಿತರರು ಸಂಭ್ರಮದಲ್ಲಿ ಭಾಗಿಯಾಗಿದ್ದರು