ಸಿದ್ದರಾಮಯ್ಯ ಅತಿಥಿ ಶಾಸಕ: ಶೀಲವಂತ

ಗುಳೇದಗುಡ್ಡ ಜೂ.10- ಪಟ್ಟಣದಲ್ಲಿ ಪುರಸಭೆಯ ಬಜೆಟ್ ಮಂಡನೆ ವಿಶೇಷ ಸಭೆಯಲ್ಲಿ ಪುರಸಭೆ ಆಡಳಿತ ಮಂಡಳಿಯ ನಾಲ್ವರು ಸದಸ್ಯರ ಗೈರು ಹಾಗೂ ಆಡಳಿತ ಪಕ್ಷದ ಕೆಲವು ಸದಸ್ಯರು ಬಜೆಟ್‍ಗೆ ವಿರೋಧ ವ್ಯಕ್ತಪಡಿಸಿದ್ದಲ್ಲದೇ, ಪ್ರೊಸಿಡಿಂಗ್‍ಗೆ ವಿರೋಧ ಪಕ್ಷದವರು ಜೊತೆಗೆ ಆಡಳಿತ ಪಕ್ಷದ ಕೆಲವು ಸದಸ್ಯರು ಸಹಿ ಮಾಡಿದ್ದರಿಂದ ಸಭೆ ಮುಂದೂಡಿದೆ. ಇದರಿಂದ ಇದು ಆಡಳಿತದ ನಡೆಸುವವರ ನಾಯಕರಿಗೆ ಹಾಗೂ ಸದಸ್ಯರಿಗೆ ಅವಮಾನಕರ ಸಂಗತಿ. ಬಜೆಟ್‍ಗೆ ಅನಿಮೋಧನೆ ದೊರೆತಿದ್ದರೆ ಪಟ್ಟಣದಲ್ಲಿ ಮುಂಬರುವ ಅಭಿವೃದ್ಧಿ ಕಾಮಗಾರಿಗಳಿಗೆ ಅನುಕೂಲವಾಗುತ್ತಿತ್ತು. ಇದರಿಂದ ಪುರಸಭೆಯಲ್ಲಿ ಆಡಳಿತ ರೂಡ ಕಾಂಗ್ರೆಸ ಪಕ್ಷ ಸ್ಪಷ್ಟವಾಗಿ ಬಹುಮತ ಕಳೆದುಕೊಂಡಿದೆ. ಗುಳೇದಗುಡ್ಡ ಪುರಸಭೆ ಆಡಳಿತದಲ್ಲಿ ಹಿಡಿತವಿಲ್ಲ ಎಂಬುದು ಸಾಮಾನ್ಯ ಜನರಿಗೆ ಕೂಡ ಅರ್ಥವಾಗುತ್ತದೆ. ಇದನ್ನು ನೋಡಿದರೆ ಈ ಕ್ಷೇತ್ರದ ಶಾಸಕರ ಸಂಪರ್ಕದ ಕೊರತೆ ಎಂದು ಗೋಚರವಾಗುತ್ತದೆ. ಈ ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯನವರು ನಿಜವಾದ ಶಾಸಕರಲ್ಲ, ಅವರೊಬ್ಬ ಬಾದಾಮಿ ಕ್ಷೇತ್ರಕ್ಕೆ ಅತಿಥಿ ಶಾಸಕರಾಗಿದ್ದಾರೆ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಅವರು ಹರಿಹಾಯ್ದಿದ್ದಾರೆ.
ಪಟ್ಟಣದ ಭಾಜಪ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ರಾಜಶೇಖರ ಶೀಲವಂತ ಅವರು, ಈ ಕ್ಷೇತ್ರದ ಶಾಸಕ ಸಿದ್ದರಾಮಯ್ಯನವರು ರಾಜ್ಯ ಸರ್ಕಾರದ ಆಡಳಿತದಲ್ಲಿ ಸಹ ಪ್ರತಿಯೊಂದಕ್ಕೂ ವಿರೋಧ ಮಾಡಿ ಸರಿಯಾಗಿ ಆಡಳಿತಕ್ಕೆ ಅನುವು ಮಾಡಿಕೊಡದ ಅವರು, ಬಾದಾಮಿ ಕ್ಷೇತ್ರದ ಗುಳೇದಗುಡ್ಡ ಪುರಸಭೆ ಆಡಳಿತದ ಬಗ್ಗೆ ಕಿಂಚಿತ್ ಆಸಕ್ತಿ ಇಲ್ಲವೆಂದು ಸ್ಪಷ್ಟವಾಗುತ್ತದೆ. ಹೀಗಾಗಿ ಇವರಿಗೆ ಈ ಕ್ಷೇತ್ರದ ಜನತೆ ಇವರಿಗೆ ಅತಿಥಿ ಶಾಸಕರೆಂದು ಬಿರುದು ನೀಡಿದ್ದು ನಿಜವೆನಿಸುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯವರಿಗೆ ವ್ಯಂಗವಾಡಿದರು.
ಕೋವಿಡ್ ಸಂದರ್ಭದಲ್ಲಿ ಜನರಿಗೆ ಸಾಕಷ್ಟು ತೊಂದರೆಗಳಿದ್ಯಾಗ್ಯೂ ಕೊನೆಗಳಿಗೆಯಲ್ಲಿ ಪ್ಲೈ ವಿಜಿಟ್ ಮೂಲಕ ಒಂದು ಸಾರಿ ಭೆಟಿ ನೀಡಿದ್ದು ಬಿಟ್ಟರೇ ಜನರಿಗೆ ಧೈರ್ಯ ತುಂಬುವ ಕೆಲಸ ಸಹ ಇವರು ಮಾಡಿಲ್ಲ. ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ನಾಮಾಕಾವಸ್ತೆ ಎನ್ನುವಂತೆ 3 ಅಂಬ್ಯೂಲೆನ್ಸ್ ಕೊಡಮಾಡಿದ್ದು ಸಹ ಯಾವುದೇ ಉಪಯೋಗಕ್ಕೆ ಬಂದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭಾಜಪ ಮುಖಂಡ ಕಲಮಕಿಶೋರ ಮಾಲಪಾಣಿ, ಮುಖಂಡರಾದ ಸಂಪತಕುಮಾರ ರಾಠಿ, ಮದುಸೂಧನ ರಾಂದಡ, ಸಂಜೀವ ಕಾರಕೂನ್, ರಂಗಪ್ಪ ಶೇಬಿನಕಟ್ಟಿ, ಬಾಗ್ಯಾ ಉದ್ನೂರ, ಭಾಜಪ ನಗರ ಘಟಕದ ಅಧ್ಯಕ್ಷ ವಸಂತಸಾ ಧೋಂಗಡೆ, ಶಿವಾನಂದ ಎಣ್ಣಿ, ಸಿದ್ದು ಅರಕಾಲಚಿಟ್ಟಿ, ಪುರಸಭೆ ಸದಸ್ಯ ಕಾಶಿನಾಥ ಕಲಾಲ, ಮಲ್ಲೇಶ ಕಲಾದಗಿ, ಸಂಗಮ್ಮ ಅರುಟಗಿ, ಭಾಜಪ ಯುವ ಮೋರ್ಚಾ ಅಧ್ಯಕ್ಷ ರಾಜು ಗೌಡರ, ರಾಮಕೃಷ್ಣ ಮಿಣಜಗಿ, ಭುವನ ಪೂಜಾರ ಸೇರಿದಂತೆ ಮತ್ತತರರಿದ್ದರು.