ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ:ರಾಹುಲ್ ಭರವಸೆ

ಕೋಲಾರ,ಮೇ,೧೬:ಕೆಪಿಸಿಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಟ್ಟು ಸಡಿಲಿಸದ ಕಾರಣ ಕಾಂಗ್ರೇಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಕಾಂಗ್ರೇಸ್ ದಿನವಿಡೀ ನಿರಂತರವಾದ ಸಭೆಗಳನ್ನು ನಡೆಸಿ ಅಂತಿಮ ನಿರ್ಧಾರಕ್ಕೆ ಬಂದಿದೆ. ಸಿದ್ದರಾಮಯ್ಯ ಅವರ ಹೆಸರನ್ನು ಕಾಂಗ್ರೇಸ್ ಪಕ್ಷದ ನಾಯಕನ ಸ್ಥಾನಕ್ಕೆ ನಿರ್ಧರಿಸಿದೆ. ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿಯವರ ಅಭಯ ಹಸ್ತ ಸಿಕ್ಕಿದೆ ಎಂದು ಕಾಂಗ್ರೇಸ್ ಮೂಲಗಳು ತಿಳಿಸಿವೆ,
ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿ ಅಗುವುದು ಬಹುತೇಕ ಖಚಿತವಾಗಿದ್ದು ಅಂತಿಮವಾಗಿ ಘೋಷಣೆಯಷ್ಟೆ ಬಾಕಿ ಉಳಿದಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರ ಪರ ಹೆಚ್ಚಿನ ಶಾಸಕರು ಬೆಂಬಲವನ್ನು ವ್ಯಕ್ತ ಪಡೆಸಿದ್ದಾರೆ. ವೀಕ್ಷಣ ವರದಿಯೂ ಸಹ ಸಿದ್ದರಾಮಯ್ಯ ಅವರ ಪರ ಇದೆಯೆಂದು ಹೇಳಲಾಗಿದೆ.
ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಖ್ಯಾತ ದೃಶ್ಯ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ” ಸಿದ್ದರಾಮಯ್ಯ ಅವರಿಗೆ ಆಲ್ ದೆ ಬೆಸ್ಟ್” ಎಂದು ಹೇಳುವ ಮೂಲಕ ಗದ್ದುಗೆಗಾಗಿ ನಡೆದ ಗುದ್ದಾಟ ಹೋರಾಟದಿಂದ ಹಿಂದೆ ಸರಿದಿದ್ದಾರೆ.
ಸಿದ್ದರಾಮಯ್ಯ ಅವರಿಗೆ ದೊಡ್ಡ ಮಟ್ಟದ ಬೆಂಬಲದ ಸಂಖ್ಯಾ ಬಲವನ್ನು ಹೊಂದಿದ್ದಾರೆ. ನಾನು ಒಂಟಿ ನನ್ನ ಬಳಿ ನಿರೀಕ್ಷಿತ ಮಟ್ಟದಲ್ಲಿ ನಂಬರ್ ಇಲ್ಲವಾಗಿದೆ ಎಂದು ಹೇಳುವ ಜೂತೆಗೆ ಕೇಂದ್ರದ ನಾಯಕತ್ವದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತ ಪಡೆಸಿದ್ದಾರೆ.
ನಾಯಕತ್ವದ ಆಯ್ಕೆ ಕುರಿತಂತೆ ಚರ್ಚಿಸಲು ವರಿಷ್ಠರ ಆಹ್ವಾನದ ಮೇರೆಗೆ ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ ಸೋಮವಾರ ಮಧ್ಯಾಹ್ನವೇ ದಿಲ್ಲಿಗೆ ತೆರಳಿದ್ದಾರೆ.ಇವರೊಂದಿಗೆ ಆಪ್ತರಾದ ಎಂ.ಬಿ.ಪಾಟೀಲ್, ಬೈರತಿ ಸುರೇಶ್, ಜಮೀರ್ ಆಹಮದ್, ಕೆ.ಜೆ.ಜಾರ್ಜ್, ಸೇರಿದಂತೆ ಎಲ್ಲಾ ಸಮುದಾಯದ ಮುಖಂಡರು ಸಹ ಸಾಥ್ ನೀಡಲು ಜೂತೆಯಲ್ಲಿ ತೆರಳಿದ್ದಾರೆ. ಹೈಕಮಾಂಡ್ ಬುಲಾವ್ ಮೇರೆಗೆ ಸಂಜೆ.ವಿಶೇಷ ವಿಮಾನದಲ್ಲಿ ದಿಲ್ಲಿಗೆ ತೆರಳ ಬೇಕಿದ್ದ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೊನೆಯ ಕ್ಷಣದಲ್ಲಿ ಅರೋಗ್ಯ ಸಮಸ್ಯೆಯನ್ನು ಮುಂದೆ ಮಾಡಿ ದೆಹಲಿಯ ಪ್ರಯಾಣವನ್ನು ರದ್ದು ಪಡೆಸಿದ್ದಾರೆ.
ಹೈ ಕಮಾಂಡ್ ಭೇಟಿಗೂ ಮುನ್ನ ತಮ್ಮ ಆಪ್ತ ಶಾಸಕರ ಜತೆ ಸಿದ್ದರಾಮಯ್ಯ ಗುಪ್ತ ಸಭೆ ನಡೆಸಿದರು. ಸಭೆಯಲ್ಲಿ ಡಾ.ಯತೀಂದ್ರ ಅವರು ಸೇರಿದಂತೆ ಸಿದ್ದು ಆಪ್ತರು ಭಾಗವಹಿಸಿದ್ದರು, ಅಧಿಕಾರ ಹಂಚಿಕೆ ಸೂತ್ರ ಇಟ್ಟರೆ ಯಾವ ಪಟ್ಟು ಹಾಕಬೇಕು ? ಹೇಗೆ ಎದುರಿಸ ಬೇಕು ? ಎಂಬುವುದರ ಕುರಿತು ಸಮಾಲೋಚಿಸಿದರು,
ಈ ಮಧ್ಯೆ ಸಿದ್ದರಾಮಯ್ಯ ಅವರ ಬೆಂಬಲಿಗರ ಪಡೆ ಮತ್ತು ಶೋಷಿತ ಸಮುದಾಯಗಳ ಒಕ್ಕೂಟದ ಪ್ರಗತಿ ಪರ ಸ್ವಾಮೀಜಿಯವರು ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯ ಮಂತ್ರಿ ಆಗಬೇಕೆಂಬ ಒತ್ತಾಯವನ್ನು ಹೇರಿದ್ದಾರೆ.