ಸಿದ್ದರಾಮಯ್ಯರಿಗೆ ಮುಖಂಡರ ಅಭಿನಂದನೆ

ಕೋಲಾರ,ನ,೧೪:ನಗರದ ಬಂಗಾರಪೇಟೆ ರಸ್ತೆಯಲ್ಲಿನ ಅಂಬೇಡ್ಕರ್ ಪುತ್ಥಳಿಕೆಗೆ ಮಾಲಾರ್ಪಣೆ ಮಾಡಿದಾಗ ದಲಿತ ಸಂಘಟನೆಗಳ ಮುಖಂಡರು ಸಂಘಟಿತರಾಗಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿ ಹರ್ಷ ವ್ಯಕ್ತ ಪಡೆಸಿದರು.
ಇದೆ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಎಚ್.ಬೆಂಬಲಿಗರು ಅಚಾನಕ್ ಅಗಿ ಪ್ರತ್ಯೇಕ್ಷವಾಗಿ ಕೆ.ಎಚ್.ಮುನಿಯಪ್ಪ ಪರ ಘೋಷಣೆ ಕೊಗಿದ ನಂತರ ಅಂಬೇಡ್ಕರ್‌ಗೆ ಪ್ರತಮೆಗೆ ಮಾಲಾರ್ಪಣೆ ಮಾಡಲು ಬಂದ ಸಿದ್ದರಾಮಯ್ಯ ಅವರಿಗೂ ಸ್ವಾಗತಿಸಿದರು.
ಕೋಲಾರದಲ್ಲಿ ಕೆ.ಎಚ್. ಮತ್ತು ರಮೇಶ್ ಕುಮಾರ್ ಬಣಗಳ ನಡುವೆ ಮುಸಕಿನ ಗುದ್ದಾಟ ನಡೆಯುತ್ತಿರುವುದು ಜನಜನಿತವಾಗಿದೆ. ಎ.ಐ.ಸಿ.ಸಿ. ವರ್ಕಿಂಗ್ ಸಮಿತಿ ಸದಸ್ಯರಾಗಿರುವ ಕೆ.ಎಚ್.ಮುನಿಯಪ್ಪ ಅವರಿಗೆ ಗುಜರಾತಿನ ಚುನಾವಣೆಯ ಕೆಲವು ಜವಾಬ್ದಾರಿಗಳನ್ನು ನೀಡಿರುವ ಹಿನ್ನಲೆಯಲ್ಲಿ ಅವರು ಗುಜರಾತಿಗೆ ತೆರಳಿದ್ದು ತಮ್ಮ ಜವಾಬ್ದಾರಿಯ ಬ್ಯೂಸಿಯಲ್ಲಿದ್ದರು. ,
ಇತ್ತ ಸಿದ್ದರಾಮಯ್ಯ ಅವರ ಕಾರ್ಯಕ್ರಮಗಳತ್ತ ತಲೆ ಹಾಕದ ಕೆ.ಎಚ್.ಬೆಂಬಲಿಗರು ಅಂಬೇಡ್ಕರ್ ಪ್ರತಿಮೆ ಬಳಿ ಪ್ರತ್ಯಕ್ಷವಾಗಿ ಕೆ.ಎಚ್.ಪರ ಘೋಷಣೆ ಕೂಗಿ ವಾಪಸ್ಸಾಗಿದ್ದು ಕುತೂಹಲಕಾರಿಯಾಗಿತ್ತು, .