ಸಿದ್ದರಾಮಯ್ಯರಿಗೆ ಭರ್ಜರಿ ಸ್ವಾಗತ

ಕೋಲಾರ,ಮಾ.೨೯: ಕೋಲಾರಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಕಾಂಗ್ರೆಸ್ ಕಾರ್ಯರ್ತರು ಭರ್ಜರಿಯಾಗಿ ಸ್ವಾಗತಿಸಿದರು.
ಕೋಲಾರದಲ್ಲಿ ನಡೆಯಲಿರುವ ಅಹಿಂದಾ ಸಮಾವೇಶಕ್ಕೆ ಆಗಮಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ, ಕೋಲಾರದ ಗಡಿ ರಾಮಸಂದ್ರ ಗೇಟ್ ಬಳಿ ಅದ್ದೂರಿಯಾಗಿ ಸ್ವಾಗತ ಮಾಡಿದರು. ಸಿದ್ದರಾಮಯ್ಯ ಅವರಿಗೆ ಬೆಳ್ಳಿಯ ಗದೆ ಕೊಟ್ಟು, ಬೃಹತ್ ಹಾತ ಹಾಕಿ ಕೋಲಾರಕ್ಕೆ ಬರಮಾಡಿಕೊಂಡರು. ಇದೇ ವೇಳೆ ಕೋಲಾರ ಹೊರವಲಯದಲ್ಲಿರುವ ಕೊಂಡರಾಜನಗಳ್ಳಿ ಬಳಿ ಇರುವ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು, ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿದ್ರು. ದೇವಸ್ಥಾನದ ಪೂಜೆ ಬಳಿಕ, ಕ್ಲಾಕ್ ಟವರ್ ಬಳಿ ಇರುವ ದರ್ಗಾಗೆ ತೆರಳಿದ್ದು ನಮಾಜ್ ಸಲ್ಲಿಸಿದರು.
ಇನ್ನು ಈ ವೇಳೆ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ನಂಜೇಗೌಡ ಹಾಗೂ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಚಂದ್ರಾರೆಡ್ಡಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಹಾಜರಿದ್ದರು.