ಸಿದ್ದರಾಮಯ್ಯರಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ

??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಸಂಜೆವಾಣಿ ನ್ಯೂಸ್
ಎಚ್.ಡಿ.ಕೋಟೆ.ಮೇ.19:- ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಚಾರ ಮೇರೆ ಮೀರಿದೆ, ಅಸೆಂಬ್ಲಿ ಎಲೆಕ್ಷನ್ ವೇಳೆ ನಮ್ಮ ಸರ್ಕಾರ ಬಂದರೆ ಶಿಕ್ಷಕರು ಮತ್ತು ನೌಕರರಿಗೆ 7ನೇ ವೇತನ ಅಯೋಗ, ಓಪಿಎಸ್ (ಹಳೆ ಪಿಂಚಣಿ ವ್ಯವಸ್ಥೆ) ಜಾರಿ ಮಾಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲವನ್ನು ಮರೆತಿದ್ದಾರೆ, ಅಹಿಂದ ಹೆಸರಲ್ಲಿ ಕುರ್ಚಿ ಏರಿದ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯಥಿರ್ü ಕೆ.ಸಿ.ಪುಟ್ಟಸಿದ್ದಶೆಟ್ಟಿ ಆರೋಪಿಸಿದರು.
ಎಚ್.ಡಿ.ಕೋಟೆ ತಾಲೂಕು ಪತ್ರಕರ್ತರ ಸಂಘದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಖಾಸಗಿ ಶಾಲಾ ಕಾಲೇಜು ಬಹಳಷ್ಟಿದ್ದು, ಅವುಗಳಿಗೆ ಸರ್ಕಾರದಿಂದ ಮಂಜೂರಾತಿ ಜತೆಗೆ ಪ್ರಥಮ ಮಾನ್ಯತೆಯೂ ಸಿಕ್ಕಿದೆ ಅದರೂ ಹಣಕ್ಕಾಗಿ ಪ್ರತಿ ವರ್ಷ ಮಾನ್ಯತೆ ನವೀಕರಣ ಕಡ್ಡಾಯ ಮಾಡಿ ಅದರಲ್ಲೂ ಲೋಕೋಪಯೋಗಿ ಇಲಾಖೆಯಿಂದ ಬಿಲ್ಡಿಂಗ್ ಭದ್ರತೆ ಹಾಗೂ ಅಗ್ನಿಶಾಮಕ ದಳದ ಕಚೇರಿಯಿಂದ ಸರ್ಟಿಫಿಕೇಟ್ ಕೇಳಿ ರಾಜ್ಯದಲ್ಲಿ ಯಾವ ಇಲಾಖೆಗೆ ಹೋದರು ಲಂಚ ಲಂಚ ಎಂದು ಭ್ರಷ್ಟಚಾರದ ದಂಧೆ ನಡಯುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿದಿಲ್ಲವೇ, ಜಾಣ ಕುರುಡತನವೇಕೆ? ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ ಅವರು, ವ್ಯಾಪಕವಾಗಿ ನಡೆಯುತ್ತಿರುವ ಭ್ರಷ್ಟಚಾರಕ್ಕೆ ಕೂಡಲೇ ಕಡಿವಾಣ ಹಾಕಿ, ಇಲ್ಲದಿದ್ದಲ್ಲಿ ತಮ್ಮ ಹಾಗೂ ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ ಚಳವಳಿ ನಡೆಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನನ್ನನ್ನು ಬೆಂಬಲಿಸಿ: ನಾನು ಮೂಲತಃ ಶಿಕ್ಷಕ, ಪ್ರೌಢಶಾಲಾ ಸಹ ಶಿಕ್ಷಕನಾಗಿ ಕೆಲಸ ಮಾಡಿದ್ದೇನೆ, ಸಹ ಶಿಕ್ಷಕರಿಗೆ ಸಂಘ ಇರಲಿಲ್ಲ 1986 ರಲ್ಲಿ ಸಂಘ ಕಟ್ಟಿ ರಾಜ್ಯಾದಂತ ಹೋರಾಟ ಮಾಡಿ ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿದ್ದೇನೆ, ಆಗಾಗಿ ರಾಜಕೀಯ ಪಕ್ಷಗಳಿಗೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ, ಅವರ ಅಬ್ಬರದ ಸುಳ್ಳು ಭರವಸೆಗಳನ್ನು ಪ್ರಬುದ್ಧ ಶಿಕ್ಷಕ ಮತದಾರರು ನಂಬಬಾರದು, ಹಾಗಾಗಿ ಶಿಕ್ಷಕರ ಬಗ್ಗೆ ಕಾಳಜಿ ಇರುವ ನನ್ನನ್ನು ಪರಿಗಣಿಸಿ ಪಕ್ಷೇತರ ಅಭ್ಯಥಿರ್üಯಾದ ನನಗೆ ಪ್ರಥಮ(ಪ್ರಾಶಸ್ತ್ಯ)ದ ಮತ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ರಾಜ್ಯ ಸಂಚಾಲಕ ಹೆಚ್.ಎಲ್.ಕೆಂಪಶೆಟ್ಟಿ, ಹೆಬ್ಬಲಗುಪ್ಪೆ ಶಿವಪ್ಪಶೆಟ್ಟಿ ಇದ್ದರು.