ತಿ.ನರಸೀಪುರ: ಮಾ.25:- ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಂಡಾಯವಿದ್ದು, ಸಿದ್ದರಾಮಯ್ಯರನ್ನು ಸೋಲಿಸಲು ಕಾಂಗ್ರೆಸ್ ನಾಯಕರೇ ಖೆಡ್ಡಾ ತೋಡಿದ್ದು, ಸಿದ್ದರಾಮಯ್ಯರನ್ನು ಸೋಲಿಸಿ ಮೂಲೆಗುಂಪು ಮಾಡಲು ಬಿಜೆಪಿ ಪಕ್ಷ ಬೇಕಿಲ್ಲ ,ಕಾಂಗ್ರೆಸ್ ಪಕ್ಷದ ನಾಯಕರೇ ಅಸ್ತ್ರ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗವಾಡಿದರು.
ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ವರುಣಾ ಮತ್ತು ತಿ.ನರಸೀಪುರ ಬಿಜೆಪಿ ಯುವ ಮೋರ್ಚಾದ ಘಟಕಗಳಿಂದ ಹಮ್ಮಿಕೊಂಡಿದ್ದ ‘ಯುವ ಚೈತನ್ಯ’ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರುವ ಹಗಲುಗನಸು ಕಾಣುತ್ತಿದ್ದು, ಈಗಾಗಲೇ ಮುಖ್ಯಮಂತ್ರಿ ಗಾದಿಗೆ ಸಿದ್ದರಾಮಯ್ಯ ಮತ್ತು ಹಲವು ಕಾಂಗ್ರೆಸ್ ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.
ಸಿದ್ದರಾಮಯ್ಯರನ್ನು ಹಣಿಯಲು ರಹಸ್ಯತಂತ್ರಗಾರಿಕೆ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷದ ಹಲವು ನಾಯಕರ ಷಡ್ಯಂತ್ರಕ್ಕೆ ಸಿದ್ದರಾಮಯ್ಯ ಬಲಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಭ್ರಷ್ಟಚಾರದಲ್ಲಿ ಮುಳುಗಿ ಎದ್ದಿರುವ ಪಕ್ಷ ಕಳೆದ 65 ವರ್ಷಗಳಲ್ಲಿ ಕಾಂಗ್ರೆಸ್ 2ಜಿ ಸ್ಪೆಕ್ಟ್ರಂ ,ಕಾಮನ್ ವೆಲ್ತ್ ,ಬೊಫೆÇೀರ್ಸ್ ಹಗರಣಗಳಿಂದ ನಿರಂತರ ಭ್ರಷ್ಟಾಚಾರದಲ್ಲಿ ತೊಡಗಿದೆ. ಕಾಂಗ್ರೆಸ್ ಎಂದರೆ “ಭ್ರಷ್ಟಾಚಾರಿ” ಎಂಬ ಪರ್ಯಾಯ ನಾಮ ಸೃಷ್ಟಿಯಾಗಿದೆ.ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟಾಚಾರವನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದರು.
ಕರ್ನಾಟಕದಲ್ಲಿ ಕೇವಲ ನಗರ ಪ್ರದೇಶಗಳ ಪಕ್ಷವಾಗಿದ್ದ ಬಿಜೆಪಿಯನ್ನು ಗ್ರಾಮೀಣ ಪ್ರದೇಶಕ್ಕೂ ಪಸರಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಸಲ್ಲುತ್ತದೆ.
ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಕ್ಷ ಗೆಲ್ಲಬೇಕು. ಈ ಭಾಗದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಜನಪರ ಯೋಜನೆಗಳನ್ನು ಜನತೆಗೆ ಮನವರಿಕೆ ಮಾಡಿದಲ್ಲಿ ಈ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು.ಬಿಜೆಪಿ ಪಕ್ಷ 150ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದರು.
ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ,ಅಂಬೇಡ್ಕರ್ ರವರು ಎಸ್.ಸಿ ಮತ್ತು ಎಸ್ಟಿ ವರ್ಗಗಳಿಗೆ 1950 ರಲ್ಲಿ ಸಂವಿಧಾನಾತ್ಮಕ ಮೀಸಲಾತಿ ನೀಡಿದರು.ರಾಜ್ಯ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಈ ಎರಡು ವರ್ಗಕ್ಕೆ ಕ್ರಮವಾಗಿ 17 % ಮತ್ತು 7% ಮೀಸಲಾತಿಯನ್ನು ಹೆಚ್ಚಿಸಿ 9ನೇ ಶೆಡ್ಯೂಲ್ ನಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಭೂ ಒಡೆತನ ಯೋಜನೆಯಡಿ ಜಮೀನು ಖರೀದಿ ದರವನ್ನು 15 ರಿಂದ 20 ಲಕ್ಷಕ್ಕೆ ಏರಿಸಿದ್ದು, ಪರಿಶಿಷ್ಟ ಜಾತಿ /ಪಂಗಡದ ಪ್ರತಿ ಕುಟುಂಬಕ್ಕೆ 75ಯೂನಿಟ್ ಉಚಿತ ವಿದ್ಯುತ್ ನೀಡಿದೆ. ಕಾಂಗ್ರೆಸ್ ಗೆದ್ದ ನಂತರ ನೀಡುತ್ತೇವೆ ಎಂದು ಸುಳ್ಳು ಭರವಸೆ ನೀಡಿದರೆ, ಬಿಜೆಪಿ ಪಕ್ಷ ಈಗಾಗಲೇ ಹಲವು ಜನಪರ ಯೋಜನೆಗಳನ್ನು ಜನರಿಗೆ ನೀಡಿದೆ.ಕರ್ನಾಟಕದಲ್ಲಿ ಬಿಜೆಪಿ ಪಕ್ಷದಿಂದ ವ್ಯಕ್ತಿಗತ ಅಭ್ಯರ್ಥಿಯಿಲ್ಲ ,ಕಮಲದ ಗುರುತು ಮಾತ್ರ ಅಭ್ಯರ್ಥಿ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ನಿರಂಜನ್ ಕುಮಾರ್,ಕ್ಷೇತ್ರದ ಉಸ್ತುವಾರಿ ಹೇಮಂತ್ ಕುಮಾರಗೌಡ,ಮಾಜಿ ವಿಧಾನ ಪರಿಷತ್ ಸದಸ್ಯ ಸಿ. ರಮೇಶ,ಮಾಜಿ ಶಾಸಕ ಎಲ್.ಎನ್.ಭಾರತೀಶಂಕರ್ , ಬಿಜೆಪಿ ಜಿಲ್ಲಾಧ್ಯಕ್ಷ ಮಂಗಳ ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವನೂರು ಪ್ರತಾಪ್, ಜಿಲ್ಲಾ ಎಸ್ ಸಿ ಘಟಕಾಧ್ಯಕ್ಷ ಮಹಾದೇವಯ್ಯ,ಉಪಾಧ್ಯಕ್ಷ ದಾಸಯ್ಯ,ಮಾಜಿ ಜಿ.ಪಂ.ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ,ರಾಜ್ಯ ಕಾರ್ಯಕಾರಿಣಿ ಸದಸ್ಯ ಕರೋಹಟ್ಟಿ ಮಹದೇವಯ್ಯ, ತಿ.ನರಸೀಪುರ ಆಕಾಂಕ್ಷಿ ಯಶೋಧ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಆನಂದ ಶರ್ಮಾ,ತೋಟದಪ್ಪ ಬಸವರಾಜು, ಶರತ್ ಪುಟ್ಟಬುದ್ದಿ, ಮಾಜಿ ಜಿಪಂ ಸದಸ್ಯ ಸದಾನಂದ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ಸಿ.ಲೋಕೇಶ, ಟೌನ್ ಅಧ್ಯಕ್ಷ ಹಾಗೂಪುರಸಭೆ ಸದಸ್ಯ ಕಿರಣ್, ವರಣಾ ಕ್ಷೇತ್ರ ಅಧ್ಯಕ್ಷ ವಿಜಯ್ ಕುಮಾರ್, ತಾಲ್ಲೂಕು ಬಿಜೆಪಿ ಯುವ ಘಟಕ ಅಧ್ಯಕ್ಷ ಕುರುಬೂರು ಶಿವಕುಮಾರ್, ಪುರಸಭೆ ಸದಸ್ಯ ಲೋಕೇಶ, ಮಾಜಿ ತಾಪಂ ಸದಸ್ಯ ಕೆ.ಜಿ.ವೀರಣ್ಣ, ಹಿರಿಯೂರು ಪರಶಿವಮುರ್ತಿ, ಪ್ರವೀಣ್ ಶೆಟ್ಟಿ, ವೆಂಕಟರಮಣಶೆಟ್ಟಿ, ಮೂಗೂರು ಮಹದೇವಸ್ವಾಮಿ (ಅರವಿಂದ್) ಹರೀಶ್, ಕರೋಹಟ್ಟಿ ಬಸವರಾಜು ಇತರರು ಹಾಜರಿದ್ದರು.