ಸಿದ್ದರಾಮಯ್ಯನವರ ಹೇಳಿಕೆ ಖಂಡಿಸಿ ನಾಳೆ ಪ್ರತಿಭಟನೆ-ಭೀಮಣ್ಣ

ರಾಯಚೂರು.ನ.೦೨-ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವಹೇಳನಕಾರಿ ಹೇಳಿಕೆ ಖಂಡಿಸಿ ನಾಳೆ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ಅಮ್ಮಿಕೊಳ್ಳಲಾಗಿದೆ ಎಂದು ನಾಗರಾಧ್ಯಕ್ಷ ಮಾಚಲ್ ಭೀಮಣ್ಣ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಇತ್ತೀಚಿಗೆ ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ದಲಿತರರು ಹೊಟ್ಟೆಪಾಡಿಗಾಗಿ ಬಿಜೆಪಿ ಪಕ್ಷವನ್ನು ಸೇರಿದ್ದಾರೆ ಎಂದು ಕೀಳಾಗಿ ಮಾತಾಡಿದ್ದು ನಮಗೆ ನೋವು ಉಂಟುಮಾಡಿದೆ.
ದಲಿತರು ಸುಮಾರು ೬೦ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿದ್ದು ಆದರೆ ಕೇವಲ ಓಟಿಗಾಗಿ ಮಾತ್ರ ಬಳಸಿಕೊಂಡಿದ್ದು ಆದರೆ ಯಾವುದೇ ಸ್ಥಾನಮಾನ ದೊರೆತಿಲ್ಲ ಅದರಿಂದ ಹೇಳಿಕೆಯನ್ನು ಖಂಡಿಸಿ ನಾಳೆ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಘಟಕದ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಪ್ರತಿಭಟನೆ ಮಾಡಿ ಮಾನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಶರಣಬಸವ,ತಿಮ್ಮಪ್ಪ ಅಲ್ಕೋಡ್, ಚಿನ್ನಿ, ಶಾಂತಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.