ಸಿದ್ದಮ್ಮನಹಳ್ಳಿಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಕೋವಿಡ್ ನಿಯಮಗಳ ಕುರಿತು ಕಾಲ್ನೆಡಿಗೆ ಜಾಥಾ

ಕುರುಗೋಡು, ಏ.26 ಸಮೀಪದ ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ಗ್ರಾ.ಪಂ. ಅದ್ಯಕ್ಷ, ಉಪಾದ್ಯಕ್ಷ, ಪಿಡಿಒ, ಸದಸ್ಯರು, ಅಂಗನವಾಡಿ, ಮತ್ತು ಆಶಾಕಾರ್ಯಕರ್ತೆಯರ ಸಹಕಾರದೊಂದಿಗೆ ಕುರುಗೋಡು ತಹಶೀಲ್ದಾರ್ ರಾಘವೇಂದ್ರರಾವ್ ರವರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಾಲ್ನೆಡಿಗೆಯಲ್ಲಿ ಸಂಚರಿಸಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಜನಜಾಗೃತಿ ಮೂಡಿಸಿದರು.
ಭಾನುವಾರ ಈ ಸಂದರ್ಭದಲ್ಲಿ ಕುರುಗೋಡು ತಹಶೀಲ್ದಾರ್ ಕೆ.ರಾಘವೇಂದ್ರರಾವ್ ಮಾತನಾಡಿ, ಕೋರೋನಾ 2ನೇ ಅಲೆ ದಿನದಿಂದ-ದಿನಕ್ಕೆ ಹೆಚ್ಚಾಗುತ್ತಿದ್ದು, ಅದರ ನಿಯಂತ್ರಣಕ್ಕಾಗಿ ಗ್ರಾಮಸ್ತರು ಕಡ್ಡಾಯವಾಗಿ ಮಾಸ್ಕ್ ಉಪಯೋಗಿಸಬೇಕು, ಜೊತೆಗೆ ಸಮಾಜಿಕ ಅಂತರ ಕಾಯ್ದುಕೊಂಡು, ಆಗಾಗ್ಗೆ ಕೈಗಳನ್ನು ಸ್ವಚ್ಚವಾಗಿ ತೊಳೆದುಕೊಳ್ಳಬೇಕೆಂದು ಜನತೆಗೆ ಕೋರೋನಾ ಜಾಗ್ರುತಿ ಮೂಡಿಸಿದರು.
ಸಿದ್ದಮ್ಮನಹಳ್ಳಿ ಗ್ರಾ.ಪಂ. ಪಿಡಿಒ. ಪ್ರಕಾಶಅವರಶೆಟ್ಟಿ ಮಾತನಾಡಿ, ಈಗಾಗಲೇ ಗ್ರಾಮದಲ್ಲಿ ಚರಂಡಿಸ್ವಚ್ಚತೆ, ಕಸವಿಲೇವಾರಿ, ಸೇರಿದಂತೆ ಇತರೆ ಸ್ವಚ್ಚತಾಕಾರ್ಯಗಳನ್ನು ಪಂಚಾಯಿತಿವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಗ್ರಾಮಸ್ಥರು ಸ್ವಚ್ಚತೆಯನ್ನು ಕಾಪಾಡಿ, ಆರೋಗ್ಯವಂತರಾಗಬೇಕೆಂದು ತಿಳಿಸಿದರು.
ಗ್ರಾಮಪಂಚಾಯಿತಿ ಸದಸ್ಯ ಹೆಚ್. ಲಕ್ಷಿಕಾಂತರೆಡ್ಡಿ ಮಾತನಾಡಿ, ಕುರುಗೋಡು ತಹಶೀಲ್ದಾರ್‍ರವರು ಕೋರೋನಾ ನಿಯಮ ಪಾಲನೆ ಬಗ್ಗೆ ಜಾಗೃತಿ ಮೂಡಿಸಿರುವುದು ಸಂತಸದ ಸಂಗತಿ ಎಂದರು. ಆದ್ದರಿಂದ ಕೋರೋನಾ ನಿಯಮಗಳನ್ನು ಎಲ್ಲರೂ ಪಾಲಿಸಿ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದರು. ಸಿದ್ದಮ್ಮನಹಳ್ಳಿ ಗ್ರಾ.ಪಂ. ಅದ್ಯಕ್ಷ ಹೆಚ್.ಹನುಮಂತಪ್ಪ, ಉಪಾದ್ಯಕ್ಷ ಓಮಾಕ್ಷಿಗುರುನಾಥರೆಡ್ಡಿ, ಗ್ರಾ.ಪಂ. ಸದಸ್ಯರು, ಕರವಸೂಲಗಾರರು, ಅಂಗನವಾಡಿಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಊರಿನ ಮುಖಂಡರು, ಗ್ರಾ.ಪಂ.ಸಿಬ್ಬಂದಿ ಇದ್ದರು.