ಸಿದ್ದಬುದ್ದಯ್ಯಗಳ ಪುಣ್ಯ ಸ್ತ್ರೀ ಕಾಳವ್ವೆ

ಭಾಲ್ಕಿ:ಸೆ.25:ಸಮಗ್ರ ವಚನ ಸಾಹಿತ್ಯ ಕನ್ನಡದ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದು. 11ನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ 12ನೇ ಶತಮಾನದ ಕಡೆಯವರೆಗೂ ಬಸವಣ್ಣನವರ -ಜನಸಾಮಾನ್ಯರ ಆಂದೋಲನದ ಭಾಗವಾಗಿ ಬೆಳೆದು ಬಂತು. ಇದು ಸಾಹಿತ್ಯ ಪರಿಭಾಷೆಯ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರದ ಕಾವ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶೇಷ ಕಾವ್ಯ ಪ್ರಕಾರ. ವಚನ ಸಾಹಿತ್ಯವು ತನ್ನ ಕಾಲದಲ್ಲಿನ ಜನರ ಮನೋಭಿವ್ಯಕ್ತಿಗೆ ಸಂಗಾತಿಯಾಯಿತು.ವಚನ ಎಂದರೆ ‘ಪ್ರಮಾಣ’, ‘ಕೊಟ್ಟ ಮಾತು’ ಎಂದರ್ಥ.
ಕರ್ನಾಟಕ ಕವಯಿತ್ರಿಯರ ಚರಿತ್ರೆ ಎಂಬ ಗ್ರಂಥದಲ್ಲಿ
ಇವರು ಕ್ರಿಸ್ತಶಕ 1160 ರಲ್ಲಿ ಇದ್ದರೆಂದು, ಇವರ ಪತಿಯ ಹೆಸರು ಸಿದ್ದಬುದ್ದಯ್ಯಾ ಎಂದು ಮಾತ್ರ ಹೇಳಲಾಗಿದೆ.
ಈ ದಂಪತಿಗಳ ಜೀವನದ ಬಗ್ಗೆ ಯಾವುದೇ ವಿವರಗಳು ಲಭ್ಯವಾಗಿಲ್ಲ. ಆದರೆ ಬಸವಾದಿ ಶರಣರ ಕಾಯಕ ಜೀವಿಗಳಾಗಿ ಬದುಕಿದ ಸಾಮಾನ್ಯ ವರ್ಗಕ್ಕೆ ಸೇರಿದ ಶರಣರು ಎಂಬುದು ತಿಳಿದುಬರುತ್ತದೆ.
ಕಾಳವ್ವೆ ಅವರ ಒಂದೇ ಒಂದು ವಚನ ಮಾತ್ರ ಲಭಿಸಿದೆ. ಇವರ ವಚನಗಳ ಅಂಕಿತನಾಮ ಭೀಮೇಶ್ವರಾ.
ಎಲ್ಲಾ ಶರಣೆಯರಂತೆ ಇವರು ಸಹ ವ್ರತದ ಮಹತ್ವವನ್ನು ಹೇಳಿದ್ದಾರೆ.
ಇವರು ಲಿಂಗ ರಹಿತರನ್ನು, ವ್ರತ ಭ್ರಷ್ಟರನ್ನು ದೂರ ಇಡಬೇಕೆಂದು ಲಿಂಗದ ಬಗ್ಗೆ ತನಗಿರುವ ನಿಷ್ಠೆಯನ್ನು ವ್ಯಕ್ತ ಪಡಿಸಿದ್ದಾಳೆ.
” ವ್ರತಭ್ರಷ್ಟನ ಲಿಂಗ ಬಾಹ್ಯವ
ಕಂಡಡೆ ಸತ್ತ ನಾಯ, ಕಾಗೆಯ
ಕಂಡಂತೆ ಅವರೊಡನೆ ನುಡಿಯಲಾಗದು
ಭೀಮೇಶ್ವರಾ!”
ಕಾಳವ್ವೆ ತನ್ನ ಮೊದಲನೆಯ ಸಾಲಿನಲ್ಲಿ ವ್ರತ ಭ್ರಷ್ಟರನ್ನು ಲಿಂಗರಹಿತರನ್ನು ದೂರವಿಡಬೇಕು ಎಂದು ಹೇಳುತ್ತಾರೆ. ಅವರ ಸಂಘ ಸೇರಬಾರದು ಅವರು ಸತ್ತ ನಾಯಿ ಹಾಗೂ ಕಾಗೆ ಇದ್ದಂತೆ. ಹಾಗಾಗಿ ಅವರೊಡನೆ ಮಾತು ಸಹ ಆಡಬಾರದು ಎಂದು ಕಠಿಣವಾಗಿ ಹೇಳುತ್ತಾರೆ. ಇವರು ಹೇಳುವಂತೆ ಶರಣರು ಯಾವಾಗಲೂ ಲಿಂಗ ಧರಿಸಿಕೊಂಡು ಇರಬೇಕು ಮತ್ತು ಉತ್ತಮ ವ್ರತಾಚರಣೆಯನ್ನು ಆಚರಿಸಬೇಕು. ಒಂದು ವೇಳೆ ತಪ್ಪಿದರೆ ಅವರಿಗೂ ಸತ್ತ ನಾಯಿಗಳಿಗೂ, ಕಾಗಿಗಳಿಗೆ ವ್ಯತ್ಯಾಸವಿಲ್ಲ ಎಂದು ಹೇಳುತ್ತಾರೆ.
ಹೀಗೆ ಕಾಯಕ ಮತ್ತು ವ್ರತದ ಆಚರಣೆಯ ಬಗ್ಗೆ ಅರಿವು ಮೂಡಿಸಿದ್ದಾರೆ.
ಎಂದು ಡೋಣಗಾಪುರದ ಬಸವ ಮಂಟಪದಲ್ಲಿ ನಡೆದ ಮಹಾಮನೆ ವಚನ ಪ್ರವಚನ ಕಾರ್ಯಕ್ರಮದಲ್ಲಿ ಪೂಜ್ಯೆ ಮಾತೆ ದೇವಮ್ಮ ತಾಯಿ ಅನುಭಾವ ನುಡಿದರು.
ಸುನೀತಾ ಕನ್ನಾಳೆ, ಕರುಣಾ ಬಂಬುಳಗೆ, ಪುಟ್ಟಿ ಬಂಬುಳಗೆ ನಾಗಮಿಣಿ ಕಾಮಶಟ್ಟೆ ಇತರರು ಉಪಸ್ಥಿತರಿದ್ದರು.