ಸಿದ್ದಗಂಗಾ ಸಂಸ್ಥೆಯಿಂದ ಎಂಎಸ್ ಎಸ್ ಕ್ವಿಜ್

ದಾವಣಗೆರೆ.ಏ.೧೩: ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆ ಸಂಸ್ಥಾಪಕರಾದ ಶಿಕ್ಷಣ ಶಿಲ್ಪಿ ಡಾ . ಎಂ.ಎಸ್‌ . ಶಿವಣ್ಣನವರ ಗೌರವಾರ್ಥ ಕಳೆದ 9 ವರ್ಷಗಳಿಂದ ನಡೆಸುತ್ತಿರುವ ರಾಜ್ಯ ಮಟ್ಟದ ಎಂ ಎಸ್ ಎಸ್ – 03 ಕ್ವಿಜ್ ಏಪ್ರಿಲ್ 16 ರಂದು ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಡಿ.ಎಸ್. ಜಯಂತ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ . ಎಸ್‌ಎಸ್‌ಎಲ್‌ಸಿ ಮತ್ತು ಕೇಂದ್ರ ಪಠ್ಯಕ್ರಮದಲ್ಲಿ ಎಸ್‌ಎಸ್‌ಸಿ ಪರೀಕ್ಷೆ ಬರೆದಿರುವ ಮಕ್ಕಳು ಕ್ವಿಜ್ ನಲ್ಲಿ ಭಾಗವಹಿಸುವರು , ಲಿಖಿತ ಕ್ವಿಜ್ 10 ನೇ ತರಗತಿ ವಿಜ್ಞಾನ ಮತ್ತು ಗಣಿ ಎಸ್ ಸಿಇಆರ್ ಟಿ  ಪುಸ್ತಕಾಧಾರಿತ ಬಹು ಆಯ್ಕೆಯ 60 ಪ್ರಶ್ನೆಗಳನ್ನೊಳಗೊಂಡಿರುತ್ತದೆ .ಈಗಾಗಲೇ ರಾಜ್ಯದ ವಿವಿಧ ಪ್ರೌಢಶಾಲೆಗಳಿಂದ ಸಹಸ್ರಾರು ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ , ಕ್ವಿಜ್‌ಗೆ ಆಗಮಿಸುವ ದೂರದೂರಿನ ಮಕ್ಕಳಿಗೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ಹಾಸ್ಟೆಲ್ ನಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು.ಬೆಳಿಗ್ಗೆ 9 ರಿಂದ 10-30 ರವರೆಗೆ ರೈಲ್ವೆ ನಿಲ್ದಾಣ , ಬಸ್ ನಿಲ್ದಾಣಗಳಿಂದ ಪರ ಊರಿನಿಂದ ಬರುವ ಮಕ್ಕಳನ್ನು ಮತ್ತು ಪೋಷಕರನ್ನು ಕರೆತರಲು ಸಿದ್ಧಗಂಗಾ ಶೂಲ ಕಾಲೇಜಿನ ವಾಹನಗಳ ವ್ಯವಸ್ಥೆ ಇದೆ ಎಂದರು.ಕ್ವಿಜ್ ಮುಗಿದ ನಂತರ ಲಘು ಉಪಹಾರವಿರುತ್ತದೆ . ಏ 11 ರ  ಬೆಳಿಗ್ಗೆ 9 ಗಂಟೆಯಿಂದ ನೊಂದಣಿ ಮತ್ತು ಪ್ರವೇಶ ಪತ್ರ ನೀಡಲಾಗುತ್ತದೆ , 11 ಗಂಟೆಗೆ ಪ್ರಾರಂಭವಾಗುವ ಲಿಖಿತ ಕ್ವಿಜ್‌ನ್ನು ಮಕ್ಕಳು ಓ . , ಎಂ . ಆರ್ ಶೀಟ್‌ನಲ್ಲಿ ಉತ್ತರಿಸುವರು , ವಿಜ್ಞಾನದ 10 , ಗಣಿತದ 30 ಪ್ರಶ್ನೆಗಳಿಗೆ ಉತ್ತರಿಸಲು 60 ನಿಮಿಷಗಳ ಕಾಲಾವಕಾಶವಿರುತ್ತದೆ , ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಪ್ರಶ್ನೆಪತ್ರಿಕೆಗಳು ಪ್ರತ್ಯೇಕವಾಗಿರುತ್ತವೆ .ಎಂ ಎಸ್ಎಸ್ ಕ್ವಿಜ್ ಆಕರ್ಷಕ ಬಹುಮಾನಗಳನ್ನು ಹೊಂದಿದೆ . ಪ್ರಥಮ 25000 , ದ್ವಿತೀಯ 15000 ಮತ್ತು ತೃತೀಯ 10000 ರೂ . ಗಳ ನಗದು ಬಹುಮಾನ , ಆಕರ್ಷವ ಸ್ಮರಣಿಕೆ , ಮೆಡಲ್ ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ . ಜೊತೆಗೆ : 1000 ರೂ.ಗಳ 10 ಸಮಾಧಾನಕರ ಬಹುಮಾನ ಮತ್ತು 1000 ಮಕ್ಕಳು ಎಂ , ಎಸ್ . ಎಸ್ ಕ್ವಿಜ್ ಮೆಡಲ್ ಪಡೆಯುವರು ಎಂದರು.ಮಕ್ಕಳ ಪ್ರತಿಭಾ ಅನ್ವೇಷಣೆಗೆ ಇದೊಂದು ಮುಕ್ತ ಅವಕಾಶ ಬಹುಮಾನ ಗೆಲ್ಲುವ ಅದೃಷ್ಟ ಪರೀಕ್ಷೆ ಎಂದು ಸಂಸ್ಥೆಯ ನಿರ್ದೇಶಕರಾದ ಡಾ . ಡಿ . ಎಸ್ . ಜಯಂತ್‌ರವರು ತಿಳಿಸುತ್ತಾ 8073054295 ನಂಬರಿಗೆ ವಾಟ್ಸಾಪ್ ಮಾಡಿ ತ್ವರಿತವಾಗಿ ತಮ್ಮ ಹೆಸರು ನೊಂದಾಯಿಸಲು ಮಕ್ಕಳಿಗೆ ಕರೆ ನೀಡಿದರು .