ಸಿದ್ದಗಂಗಾ ಸಂಘದಿಂದ ಬಸವ ಜಯಂತಿ

ಬೀದರ್:ಎ.24: 12ನೇ ಶತಮಾನದಲ್ಲಿ ಮೇಲು ಕೀಳು ಎಂಬ ಮನೋಭಾವ ಮನುಷ್ಯನಲ್ಲಿ ಹೆಚ್ಚಾಗಿತ್ತು. ಅದನ್ನು ಕಂಡ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮ ಸಮಾಜ ನಿರ್ಮಿಸಿದರು ಎಂದು ಸಂಘದ ಉಪಾಧ್ಯಕ್ಷ ರಮೇಶ ಪಾಟೀಲ ಪಾಶಾಪೂರ ಹೇಳಿದರು ಅವರು
ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಬೀದರ ಜಿಲ್ಲಾ ಘಟಕ ವತಿಯಿಂದ ಗಾಂಧಿ ಗಂಜನಲ್ಲಿ ಭಾನುವಾರ ವಿಶ್ವಗುರು ಬಸವಣ್ಣನವರ 890ನೇ ಜಯಂತಿ ಸಮಾರಂಭದಲ್ಲಿ ಮಾತನಾಡುತ್ತಾ ಬಸವಣ್ಣನವರ ವಚನಗಳು ಕನ್ನಡ ಸಾಹಿತ್ಯದ ಮುಕಟಮಣಿಗಳಾಗಿವೆ ಎಂದು ಹೇಳಿದರು
ಸಿದ್ದಗಂಗಾ ಶ್ರೀಗಳು ಬಸವಣ್ಣನವರ ದಾಸೋಹ ಮತ್ತು ಕಾಯಕ ತತ್ವಗಳನ್ನು ಅಳವಡಿಸಿ ಕೊಂಡಿದರು. ಆ ಭಾಗದಲ್ಲಿ ಬಸವ ಜಯಂತಿ ಆಚರಿಸುವ ಮೂಲಕ ಜನರಲ್ಲಿ ಬಸವ ತತ್ವ ಹರಡಿಸಿದರು. ಅಲ್ಲದೇ ಸ್ವತಃ ಜಗಜ್ಯೋತಿ ಬಸವಣ್ಣನವರ ನಾಟಕ ಮಠದ ವತಿಯಿಂದ ಮಾಡಿಸಿ ಎಲ್ಲಡೇ ಬಸವಣ್ಣನವರ ಕೀರ್ತಿ ಹರಡಿಸಿದ್ದಾರೆ ಎಂದು ಸಂಘದ ಪ್ರದಾನ ಕಾರ್ಯದರ್ಶಿ ದೇವೇಂದ್ರ ಕರಂಜೆ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಸಿದ್ದಾರಡ್ಡಿ ನಾಗೋರಾ ವಹಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ವಿನೋದ ಪಾಟೀಲ ಚಾಂಬಳ, ಧರ್ಮವೀರ ಬಿರಾದರ, ಮಹಾದೇವ ಪಟ್ನೆ, ಮಡಿವಾಳಶೆಟ್ಟಿ ಕಾರಬಾರಿ ಯರನಳ್ಳಿ, ಮಾಣಿಕರಾವ ಮರಖಲ ಮೊದಲಾದವರು ಭಾಗವಹಿಸಿದರು.