ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮ ದಿನಾಚರಣೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಏ .03  ಪಟ್ಟಣದ ಶ್ರೀ ಪತ್ರಿ ಬಸವೇಶ್ವರ ದೇವಸ್ಥಾನದಲ್ಲಿ ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ನಡೆದಾಡುವ ದೇವರು ದೇವರೆಂದು ಪ್ರಸಿದ್ಧರಾಗಿದ್ದ ಡಾ.ಶಿವಕುಮಾರ್ ಸ್ವಾಮೀಜಿ ಅವರ 116 ನೆ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಶನಿವಾರ ರಾತ್ರಿ  ಪತ್ರಿ ಬಸವೇಶ್ವರ ದೇವಸ್ಥಾನದಲ್ಲಿ ನೆಡೆದ  ಈ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಡಾ.ಶಿವಕುಮಾರ್ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸರಳವಾಗಿ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಬಸಜ್ಜ,ಉಮಾಪತಿಸ್ವಾಮಿ, ವಕೀಲ ಆಂಜನೇಯ, ಬಳ್ಳಾರಿ    ಶಿವಪ್ಪ,ಮಲ್ಲಿಕಾರ್ಜುನ,ಅಕ್ಕಿ ಚಂದ್ರಶೇಖರ,ಫೋಟೋ ವೀರೇಶ್ ,ಕೆ ನಾಗರಾಜ್,ದೇವಸ್ಥಾನದ ಅರ್ಚಕರಾದ ಕೆ ಕೆ ಬಿ ಎಂ ಕೊಟ್ರಯ್ಯ ಸೇರಿದಂತೆ ಮಕ್ಕಳು ಹಿರಿಯರು ಪಾಲ್ಗೊಂಡಿದ್ದರು.