ಸಿದ್ದಗಂಗಾ ಶ್ರೀ ರತ್ನ ಪ್ರಶಸ್ತಿಗೆ ವಿನೋದ ಆಯ್ಕೆ

ತಾಳಿಕೋಟೆ:ಏ.1: ತಾಲೂಕಿನ ತುರಕನಗೇರಿ ಗ್ರಾಮದ ಡಾ.ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮಿಜಿ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೆ, ಸಿದ್ದಗಂಗಾ ಕರಿಯರ ಅಕಾಡೆಮಿ ವತಿಯಿಂದ ಪ್ರತಿವರ್ಷ ಕೊಡಮಾಡಲಾಗುವ ಸಿದ್ದಗಂಗಾ ಶ್ರೀರತ್ನ ಪ್ರಶಸ್ತಿಗೆ ತಾಳಿಕೋಟೆಯ ಶ್ರೀ ವಿರಕ್ತೇಶ್ವರ ಭರತನಾಟ್ಯ ಶಿಕ್ಷಣ ಸಂಸ್ಥೆಯ ಶಿಕ್ಷಕ ವಿನೋದ ಚಿಕ್ಕಮಠ ಅವರು ಆಯ್ಕೆ ಯಾಗಿದ್ದಾರೆ.
ಏಪ್ರೀಲ್ 1 ರಂದು ತುರಕನಗೇರಿಯಲ್ಲಿ ನಡೆಯಲಿರುವ ಡಾ.ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮಿಜಿಯವರ 117ನೇ ವರ್ಷದ ಜಯಂತ್ಯೋತ್ಸವ ಮತ್ತು 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ವಿನೋದಕುಮಾರ ಚಿಕ್ಕಮಠ ಅವರಿಗೆ ಪ್ರಧಾನ ಮಾಡಲಿದ್ದಾರೆ.