ಸಿದ್ದಗಂಗಾ ಶ್ರೀ ಗಳ ಜನ್ಮದಿನ : ಭಕ್ತರಿಗೆ ಪ್ರಸಾದ ವಿತರಣೆ

ದಾವಣಗೆರೆ, ಏ.1: ಪದ್ಮಭೂಷಣ, ಕರ್ನಾಟಕ ರತ್ನ, ಬಸವ ಶ್ರೀ ಪ್ರಶಸ್ತಿ ಪುರಸ್ಕೃತ ರಾದ ತ್ರಿವಿಧ ದಾಸೋಹಿ ತುಮಕೂರು ಸಿದ್ದಗಂಗಾ ಕ್ಷೇತ್ರದ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 116 ನೇ ಜಯಂತಿಯನ್ನು ಇಲ್ಲಿನ ವಿನೋಬ ನಗರದ 3ನೇ ಮೇನ್ 1ನೇ ಕ್ರಾಸ್ ನಲ್ಲಿ ಸಿದ್ದಗಂಗಾ ಗೆಳೆಯರ ಬಳಗದಿಂದ ವಿಶೇಷ ಪೂಜೆ ಸಲ್ಲಿಸಿ ಆಚರಿಸಲಾಯಿತು. ಶ್ರೀ ಶೈಲ ಮಠದ ಸಂಸ್ಕೃತ ಪಾಠ ಶಾಲೆ ಮಕ್ಕಳು ಶ್ಲೋಕ ಹಾಗೂ ವಚನಗಳನ್ನು ಪಠಣ ಮಾಡಿದರು. ಬಳಗದ ಶಿವಪ್ರಸಾದ್ ಖರ್ಜಗಿ, ಜಯರಾಜ್, ಕೇಶವ, ರಾಜಣ್ಣ, ಹೇಮರಾಜ್, ಮಹೇಶ, ಮಧು, ಶಂಕರಣ್ಣ, ಸತೀಶ್ ಪಿಸಾಳೆ, ಅಮರನಾಥ, ಮಂಜುನಾಥ್, ಚಂದ್ರಪ್ಪ, ರಾಜೇಶ್ವರಿ, ಕುಸುಮ, ಲೀಲಾವತಿ, ಸುಜಾತ, ಮಮತಾ ಹಾಗೂ ಸದ್ಭಕ್ತರು ಇದ್ದರು. ನಂತರ ಪ್ರಸಾದ ವಿತರಿಸಲಾಯಿತು.