ಸಿದ್ದಗಂಗಾ ಶ್ರೀಗಳ ಜಯಂತೋತ್ಸವ: ಸಿದ್ದಮಲ್ಲೇಶ್ವರ ಮಠದಲ್ಲಿ ಮಜ್ಜಿಗೆ, ಪಾನಕ ವಿತರಣೆ

ಚಾಮರಾಜನಗರ, ಏ.02:- ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿದ್ದ ಲಿಂಗೈಕ್ಯ ಶ್ರೀ ಡಾ. ಶಿವಕುಮಾರಸ್ವಾಮಿಗಳ 116ನೇ ಜಯಂತೋತ್ಸವದ ಅಂಗವಾಗಿ ನಗರದ ಶ್ರೀ ಮಠದ ಮುಂಭಾಗದ ಮಜ್ಜಿಗೆ ಪಾನಕ ವಿತರಣೆ ಮಾಡಲಾಯಿತು.
ಶ್ರೀಮಠದ ಮುಖ್ಯದ್ವಾರ ಬಳಿ ಶ್ರೀ ಶಿವಕುಮಾರಸ್ವಾಮಿಗಳ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಲಾಯಿತು. ಶ್ರೀಮಠಾಧ್ಯಕ್ಷರಾದ ಶ್ರೀ ಚೆನ್ನಬಸವಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ, ಮಜ್ಜಿಗೆ ಪಾನಕವನ್ನು ಸಾರ್ವಜನಿಕರಿಗೆ ವಿತರಣೆ ಮಾಡಿ ಚಾಲನೆ ಕೊಟ್ಟರು.
ಬಳಿಕ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳು ದಾಸೋಹಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದರು. ವಿದ್ಯೆ ಹಾಗೂ ಅನ್ನ ದಾಸೋಹದ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಇಂಥ ಮಹಾನ್ ಚೇತನ ಹುಟ್ಟಿದ ದಿನ ಅಚರಣೆ ಮಾಡುವ ಮೂಲಕ ಮಜ್ಜಿಗೆ, ಪಾನಕವನ್ನು ವಿತರಣೆ ಮಾಡಿ, ಅವರ ಸೇವೆಯನ್ನು ಸ್ಮರಿಸಿಕೊಳ್ಳೊಣ ಎಂದರು.
ಕಾರ್ಯಕ್ರಮದಲ್ಲಿ ಗುತ್ತಿಗೆದಾರರಾದ ಶಿವರುದ್ರಪ್ಪ, ಗಿರೀಶ್, ಶ್ರೀ ಬಸವೇಶ್ವರ ಪತ್ತಿನ ಅಧ್ಯಕ್ಷ ಯೋಗರಾಜು, ಮುಖಂಡರಾದ ಬಿ.ಕೆ.ರವಿಕುಮಾರ್, ದೊಡ್ಡರಾಯಪೇಟೆ ಗಿರೀಶ್, ಬಿರ್ಲಾನಾಗರಾಜು, ಮಹದೇವಸ್ವಾಮಿ ಐಟಿಟಿ, ಬಸವನಪುರ ಮಹದೇವಸ್ವಾಮಿ, ಆರ್.ಎಸ್. ಲಿಂಗರಾಜು, ಬಸವರಾಜು, ದಡದಹಳ್ಳಿ ಮಹದೇವಪ್ಪ ಮೊದಲಾಧವರು ಇದ್ದರು.