ಸಿದ್ದಗಂಗಾ ಶಿವಕುಮಾರ ಶ್ರೀ ಪುಣ್ಯಸ್ಮರಣೆ

ದಾವಣಗೆರೆ.ಜ.೨೨: ಅಖಿಲ ಭಾರತ ವೀರಶೈವ- ಲಿಂಗಾಯಿತ ಮಹಾಸಭಾದ ವತಿಯಿಂದ ‘ನಡೆದಾಡುವ ದೇವರು’ ಎಂದು ಹೆಸರು ಗಳಿಸಿದ್ದ ತ್ರಿವಿಧ ದಾಸೋಹಿ, ಪದ್ಮಭೂಷಣ, ಕರ್ನಾಟಕ ರತ್ನ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿಗಳವರ 4ನೇ ವರ್ಷದ ಪುಣ್ಯ ಸ್ಮರಣೋತ್ಸವ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ನಗರದ ಎಂ.ಬಿ.ಎ.ಕಾಲೇಜು ಆವರಣದ ಮಹಾಸಭಾದ ಕಛೇರಿಯಲ್ಲಿ ನಡೆದ ಈ ಸ್ಮರಣೋತ್ಸವದಲ್ಲಿ ಮಹಾಸಭಾದ ರಾಷ್ಟಿçÃಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪನವರು ಮಾತನಾಡಿ ರತ್ನ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿಗಳವರ ಲಿಂಗೈಕ್ಯರಾಗಿ 4 ವರ್ಷಗಳಾದವು. ಜಾತಿ-ಧರ್ಮ ನೋಡದೇ ಪ್ರತಿಯೊಬ್ಬರು ಜ್ಞಾನ- ಅನ್ನ ದಾಸೋಹ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ಬಸವಣ್ಣನವರ ಕಾಯಕವೇ ಕೈಲಾಸ ವಚನದಂತೆ ನಡೆದುಕೊಂಡಿದ್ದ ಪರಮಪೂಜ್ಯರನ್ನು ಪ್ರತಿಯೊಬ್ಬರು ಗೌರವಿಸುವಂತಹ ಕೆಲಸ ನಡೆಯುತ್ತಿದೆ. ಅವರ ಸ್ಮರಣೋತ್ಸವದ ಅಂಗವಾಗಿ ದಾವಣಗೆರೆಯ ಹಲವು ಕಡೆ ದಾಸೋಹ ಕರ‍್ಯಕ್ರಮ ನಡೆಯುತ್ತಿದೆ ಎಂದರು.ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿಗಳವರ 104ನೇ ವರ್ಷದ ಹುಟ್ಟುಹಬ್ಬದಲ್ಲಿ 1.4ಕೋಟಿ ಸಂಗ್ರಹಿಸಿ ಅಂದಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಶ್ರೀಮತಿ ಸೋನಿಯಾಗಾಂಧಿ ಅವರ ಮೂಲಕ ನೀಡಲಾಗಿತ್ತು ಎಂದು ಸ್ಮರಿಸಿದರು.ಅಖಿಲ ಭಾರತ ವೀರಶೈವ- ಲಿಂಗಾಯಿತ ಮಹಾಸಭಾದ ದಾವಣಗೆರೆ ಜಿಲ್ಲಾ ಘಟಕದಿಂದÀ ಜಿಲ್ಲಾಧ್ಯಕ್ಷರಾದ ದೇವರಮನೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಈ ಕರ‍್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಮಹಾಸಭಾದ ರಾಷ್ಟಿçÃಯ ಉಪಾಧ್ಯಕ್ಷ ಅಣಬೇರು ರಾಜಣ್ಣ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ್, ಮಾಜಿ ಸದಸ್ಯ ಕೆ.ಜಿ.ಶಿವಕುಮಾರ್, ಶಾಮನೂರು ಬಸವರಾಜ್, ಪ್ರಕಾಶ್ ಪಾಟೀಲ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶುಭ ಐನಳ್ಳಿ, ಸುಷ್ಮಾ ಪಾಟೀಲ್, ಡಾ. ವಿಜಯಮ್ಮ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಐಗೂರು ಚಂದ್ರಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರೇಶಿವಪ್ಳ ಸಿದ್ದೇಶ್, ಶಾಮನೂರು ಟಿ.ಬಸವರಾಜ್, ಜಿಲ್ಲಾ ಕಾರ್ಯದರ್ಶಿ ರಮೇಶ್ ಬಿ.ಜೆ, ಹರೀಶ್ ಕೆ.ಎಲ್.ಬಸಾಪುರ, ಬಾತಿ ಶಿವಕುಮಾರ್, ಶಂಭು ಉರೇಕೊಂಡಿ, ಶಿವಯೋಗಿಸ್ವಾಮಿ, ರತನ್, ಬಸವರಾಜ್, ಮಹಾಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.