ಸಿದ್ದಗಂಗಾ ಶಿವಕುಮಾರ ಜನ್ಮದಿನೋತ್ಸವ

ರಾಯಚೂರು, ಏ.೧- ದಾರಿದೀಪ ಬಳಗ ರಾಯಚೂರು ವತಿಯಿಂದ ಪರಮ ಪೂಜ್ಯ ಡಾ. ಶ್ರೀ ಶ್ರೀ ಶ್ರೀ ಸಿದ್ದಗಂಗಾ ಶಿವಕುಮಾರ ಮಹಾ ಶಿವಯೋಗಿಯವರ ೧೧೪ ನೇ ಜನ್ಮದಿನೋತ್ಸವವನ್ನು ನಗರದ ವೃದ್ಧಾಶ್ರಮದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜೆ.ಮಂಜುನಾಥ್, ಕೆ.ನವೀನ್ ರೆಡ್ಡಿ, ಸಾಯಿ ಕಿರಣ್, ಲಕ್ಷ್ಮಣ ದಾಸರಿ, ಆದಿ ಬಸವ, ಮೌಲಾಲಿ, ಉದಯ್, ಎಂ ಆರ್. ಮಂಜು, ಶ್ರೀಧರ್, ಲಿಂಗರಾಜು, ವಿನೋದ್, ಶರಣು ನಾಗು.ಸೇರಿದಂತೆ ಅನೇಕರು ಉಪಸ್ಥಿತರಿದ್ದರು.