ಸಿದ್ದಗಂಗಾ ಮಠ ವಿಶ್ವಕ್ಕೆ ಮಾದರಿ

ಔರಾದ್ :ಎ.3: ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ಪರಮ ಪೂಜ್ಯ ತ್ರಿವಿಧ ದಾಸೋಹಿ ಕರ್ನಾಟಕ ರತ್ನ ನಡೆದಾಡುವ ದೇವರು ಎಂದೇ ಖ್ಯಾತಿಯಾಗಿರುವ ಡಾ.ಶ್ರೀ ಶ್ರೀ ಶ್ರೀ ಲಿಂ. ಶಿವಕುಮಾರ್ ಮಾಹಾ ಸ್ವಾಮಿಜಿಯವರ 114 ನೇ ಜನ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳಾದ ಶಿಕ್ಷಕ ಸಂಘದ ತಾಲ್ಲೂಕು ಅದ್ಯಕ್ಷ ಗಜಾನಂದ ಮಳ್ಳಾ, ಸೂರ್ಯಕಾಂತ ಎಕಲಾರ, ಕೈಲಾಸ ಪತಿ ಕೇದಾರೆ ಜಯಂತಿಯಲ್ಲಿ ಪಾಲ್ಗೊಂಡಿದ್ದರು. ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಮಲ್ಲಿಕಾರ್ಜುನ ಟಂಕಸಾಲೆ ಅವರು ಸಿದ್ದಗಂಗಾ ಶ್ರೀಗಳ ಬಗ್ಗೆ ಹೇಳಬೇಕಾದರೆ ಅವರು ನಡೆದು ಬಂದ ದಾರಿ ಹಾಗೂ ಮಠವನ್ನು ಬೆಳೆಸಿದ ರೀತಿ ಇಡೀ ವಿಶ್ವದಲ್ಲೇ ಮಾದರಿ ಎನಿಸುತ್ತದೆ ಏಕೆಂದರೆ ಶ್ರೀ ಮಠಕ್ಕೆ ಆಗಮಿಸಿದ ಭಕ್ತರು ಶ್ರೀಗಳ ನಡೆನುಡಿ ಹಾಗೂ ಅವರ ಆಚಾರ-ವಿಚಾರಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡು ಉತ್ತಮ ಜೀವನ ನಡೆಸುವುದಕ್ಕೆ ದಾರಿದೀಪವಾಗಿದೆ ಎಂಬ ಕನಸು ಭಕ್ತರದಾಗಿದೆ. ಪೂಜ್ಯರನ್ನು ನೋಡಿದರೆ ಜಗತ್ತಿನ ಎರಡನೇ ಬಸವಣ್ಣ ಎಂಬ ಭಾವನೆ ಉಂಟಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿಕಟ ಪೂರ್ವ ಕಸಾಪ ತಾಲ್ಲೂಕು ಅದ್ಯಕ್ಷರಾದ ಜಗನಾಥ ಮುಲಗೆ,ಶಿಕ್ಷಕರ ಸಂಘದ ಜಿಲ್ಲಾ ಉಪಾದ್ಯಕ್ಷರಾದ ಪಂಡರಿ ಅಡೆ, ಜಗನಾಥ ದೇಶಮುಖ ,ಹಾವಪ್ಪಾ ದ್ಯಾಡೆ,ಅಶೋಕ ಶೇಂಬೆಳ್ಳಿ, ಅಂಬಾದಾಸ ನೆಳಗೆ ಹಾಗೂ ಪೂಜ್ಯರ ಭಕ್ತ ಸಮೂಹವೇ ಉಪಸ್ಥಿತರಿದ್ದರು.