ಸಿದ್ದಗಂಗಾಶ್ರೀಗೆ ಭಾರತರತ್ನ ಪ್ರಶಸ್ತಿಗೆ ಆಗ್ರಹಿಸಿ ಪತ್ರ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜ.22 :- ಕರ್ನಾಟಕದ ಶತಾಯುಷಿಯಾಗಿದ್ದ ನಡೆದಾಡುವ ದೇವರೆಂದೇ ಹೇಳಲಾಗುತ್ತಿದ್ದ ತುಮಕೂರಿನ ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಶಿಫಾರಸ್ಸು ಮಾಡಬೇಕೆಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ರಾಜ್ಯದ ಸಿಎಂ ಸಿದ್ದರಾಮಯ್ಯನವರಿಗೆ ಕೂಡ್ಲಿಗಿ ಕ್ಷೇತ್ರ  ಹಾಗೂ ವಿಜಯನಗರ  ಜಿಲ್ಲೆಯ ಜನತೆಯ ಪರವಾಗಿ ಮನವಿ ಪತ್ರ ಸಲ್ಲಿಸಿದ್ದಾರೆ.
ರಾಜ್ಯದ ತುಮಕೂರಿನಲ್ಲಿ ಕಳೆದ  ಏಳೆಂಟು ದಶಕಗಳ ಕಾಲ ಸಿದ್ದಗಂಗಾ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಶಿಕ್ಷಣ ಕ್ಷೇತ್ರ ಸೇರಿದಂತೆ ವಿವಿಧ ದಾಸೋಹದ ಮೂಲಕ  ಅನೇಕ ಸಾಮಾಜಿಕ ಸೇವೆಯಲ್ಲಿ ಸಲ್ಲಿಸಿದ ಕೊಡುಗೆ ಅಪಾರ ಹಾಗೂ ಅಪರಿಮಿತ, ಇವರ ಸೇವೆಯಲ್ಲಿ ಜಗತ್ತಿನಗಲಕ್ಕೂ ಮಠದಲ್ಲಿ ಓದಿದ ಅನೇಕರು ಬೇರೆ ದೇಶದಲ್ಲೂ ಉನ್ನತ ಹುದ್ದೆ ಅಲಂಕರಿಸಿದ ಉದಾಹರಣೆ ಸಾಕಷ್ಟಿವೆ.
ವಿವಿಧ  ದಾಸೋಹಿಯಾಗಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅವರು ಸಲ್ಲಿಸಿದ ಕಾರ್ಯ ಅಪಾರ. ಜಾತ್ಯಾತೀತ, ಧರ್ಮಾತೀತವಾಗಿ ಶಿಕ್ಷಣ ಸೇವೆಯನ್ನು ನೀಡುತ್ತಿದ್ದ ಅವರ ಸೇವೆಗೆ ಕರ್ನಾಟಕ ರತ್ನ ಸೇರಿದಂತೆ ಈಗಾಗಲೇ ಹಲವು ವಿಶ್ವ ವಿದ್ಯಾಲಯಗಳಿಂದ ಡಾಕ್ಟರೇಟ್ ಹಾಗೂ ಅನೇಕ ಪ್ರಶಸ್ತಿಗಳು ಲಭಿಸಿದ್ದು  ಇನ್ನೂ ಕೇಂದ್ರ ಸರ್ಕಾರ ಸಹ  2015ರಲ್ಲಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಆದರೆ ಅವರು ಮಾಡಿರುವ ಅಪಾರ ಸೇವೆಗೆ  ಪರಮಪೂಜ್ಯ ಶ್ರೀ ಮ.ನಿ.ಪ್ರ.ಸ್ವ. ಡಾ. ಶ್ರೀ  ಶಿವಕುಮಾರ ಮಹಾಶಿವಯೋಗಿಗಳರವರ 5ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ ಅವರು  ಕೂಡ್ಲಿಗಿ ಕ್ಷೇತ್ರ ಹಾಗೂ  ಸಮಸ್ತ ಕೂಡ್ಲಿಗಿ ಜನತೆಯ ಪರವಾಗಿ ಭಾನುವಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ   ಸಿದ್ದರಾಮಯ್ಯನವರಿಗೆ ಕರ್ನಾಟಕದ  ಶ್ರೇಷ್ಠ ಮಹಾನ್ ಚೇತನ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾಸ್ವಾಮಿಗಳಿಗೆ  ಮರಣೋತ್ತರವಾಗಿ ದೇಶದ ಪ್ರತಿಷ್ಠಿತ ಭಾರತರತ್ನ ಪ್ರಶಸ್ತಿ ನೀಡಲು ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಕಳುಹಿಸಿ ಗೌರವಿಸಬೇಕೆಂದು ಕೂಡ್ಲಿಗಿ ಶಾಸಕರು ಮನವಿ ಪತ್ರವನ್ನು ಸಿಎಂ ಸಿದ್ದರಾಮಯ್ಯಗೆ ಸಲ್ಲಿಸಿದರು.
ಕಾರ್ಯಕ್ರಮದ ಸಂದರ್ಭದಲ್ಲಿ  ಮಠದ ಪ್ರಸ್ತುತ ಮಹಾಸ್ವಾಮೀಜಿಗಳು, ರಾಜ್ಯದ  ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹಸಚಿವ ಡಾ. ಪರಮೇಶ್ವರ, ಸಹಕಾರ ಸಚಿವ
ಕೆ ಎನ್ ರಾಜಣ್ಣ, ಅರಣ್ಯ ಸಚಿವ  ಈಶ್ವರ್ ಖಂಡ್ರೆ ,ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ್,.ಮಾಜಿ ಸಚಿವರು ಹಾಗೂ ಹಾಲಿ ಶಾಸಕ ಟಿ ಬಿ ಜಯಚಂದ್ರ,
 ತುಮಕುರು ಲೋಕಸಭಾ ಸದಸ್ಯ ಜಿ ಎಸ್ ಬಸವರಾಜ,ಶಾಸಕರುಗಳಾದ ನೆಲಮಂಗಲ ಶ್ರೀನಿವಾಸ್,ಹೆಚ್ ವಿ ವೆಂಕಟೇಶ್,ಪಾವಗಡ, ಜಿ.ಬಿ. ಜ್ಯೋತಿಗಣೇಶ್ ತುಮಕೂರು, ಎಸ್ ಆರ್ ಶ್ರೀನಿವಾಸ್,ಗುಬ್ಬಿ, ಬಿ .ಸುರೇಶ್ ಗೌಡ,ಮಾಗಡಿ ಬಾಲಕೃಷ್ಣ ಮತ್ತು ಅಧಿಕಾರಿಗಳು ಹಾಗೂ ಅನೇಕ ಗಣ್ಯಮಾನ್ಯರು  ಉಪಸ್ಥಿತರಿದ್ದರು.