ಸಿದ್ದಗಂಗಾಶ್ರೀಗಳ ಅನ್ನ, ವಿದ್ಯೆ ದಾಸೋಹ ವಿಶ್ವಕ್ಕೆ ಮಾದರಿ

ಚಾಮರಾಜನಗರ, ಏ. 02- ನಡೆದಾಡುವ ದೇವರು ಎಂದು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದ ಸಿದ್ದಗಂಗಾ ಶ್ರೀಗಳು ಶ್ರೀಮಠದಲ್ಲಿ ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿಗೆ ನೀಡಿದ ಅನ್ನ ಹಾಗು ವಿದ್ಯೆ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ ಎಂದು ನಗರ ಮಠದ ಶ್ರೀ ಚನ್ನಬಸವಸ್ವಾಮೀಜಿ ಬಣ್ಣಿಸಿದರು.
ನಗರದ ಜಿಲ್ಲಾ ಅಸ್ಪತ್ರೆಯ ಮುಂಭಾಗ ಡೇರಿ ಸ್ವಾಮಿ ನಂದಿನಿ ಮಾರಾಟ ಕೇಂದ್ರದಲ್ಲಿ ಸಿದ್ದಗಂಗಾಶ್ರೀಗಳ 114ನೇ ಜಯಂತಿ ಸಮಾರಂ ಭದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಜ್ಜಿಗೆ, ಪಾನಕ ವಿತರಿಸಿ ಅವರು ಮಾತ ನಾಡಿ, ಸಿದ್ದಗಂಗಾ ಮಠದಲ್ಲಿ 111 ವರ್ಷಗಳ ನಿಸ್ವಾರ್ಥ ಸೇವೆಯನ್ನು ಮಾಡುವ ಮೂಲಕ ಶ್ರೀ ಶಿವಕುಮಾರಸ್ವಾಮಿಗಳು ನಮ್ಮೆಲ್ಲರಿಗೂ ಶ್ರೇಷ್ಟ ದೇವರು, ಸಿದ್ದಪುರುಷರು. ಜಗತ್ತು ತಮ್ಮತ್ತ ನೋಡು ವಂತಹ ಸಾಧನೆಯನ್ನು ಮಾಡಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದರು. ಸಿದ್ದಗಂಗಾ ಮಠದ ಕೀರ್ತಿಯನ್ನು ಹೆಚ್ಚಿಸುವ ಜೊತೆಗೆ ಎಲ್ಲಾ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ, ಊಟ, ವಸತಿ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಅವರ ಜೀವನಕ್ಕೆ ಮಾರ್ಗವಾಗುತ್ತಿದ್ದರು. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ ದಾಸೋಹ, ಭಕ್ತ ವೃಂದಕ್ಕೆ ನಿತ್ಯ ದಾಸೋಹವನ್ನು ಹಮ್ಮಿಕೊಳ್ಳುವ ಧನಿವರಿಯದ ಸೇವೆಯನ್ನು ಸಲ್ಲಿಸಿದರು. ಅವರ ಹುಟ್ಟಿದ ದಿನವಾದ ಇಂದು ಏ. 1 ರಂದು ಜಯಂತಿಯನ್ನು ಆಚರಣೆ ಮಾಡಿ, ಅವರ ಸೇವೆಯ ಕೈಂಕರ್ಯದಲ್ಲಿ ಯುವ ಪೀಳಿಗೆ ಭಾಗಿಯಾಗಬೇಕು ಎಂದರು.
ಮಧ್ಯಾಹ್ನದವರೆಗೆ ಬಿಸಿಲಿನಲ್ಲಿ ಬಂದಂತ ನೂರಾರು ಮಂದಿಗೆ ಮಜ್ಜಿಗೆ ಪಾನಕ ವನ್ನು ವಿತರಣೆ ಮಾಡಲಾಯಿತು.
ರಾಮಸಮುದ್ರ ಮಹದೇವಸ್ವಾಮಿಗಳು, ಮುಖಂಡರಾದ ಮಹದೇವಸ್ವಾಮಿ, ಡಿ.ಎಂ. ಪರಶಿವ ಮೂರ್ತಿ, ಆಲೂರುಮಲ್ಲು, ಪ್ರಸಾದ್ ಡೇರಿ, ಎನ್.ಆರ್. ಮಹೇಶ್, ಡೇರಿ ಪ್ರಮೋದ್, ಮಹದೇವಸ್ವಾಮಿ, ಮಹೇಶ್ ಇತರರಿದ್ದರು.