ಸಿದ್ದಗಂಗಾಶ್ರೀಗಳು ಸಮಾಜಕ್ಕೆ ಆಸ್ತಿ

ಹೊಸಪೇಟೆ ಏ, 2: ತುಮಕೂರು ಸಿದ್ದಗಂಗಾ ಮಠದ ದಿ.ಡಾ.ಶಿವಕುಮಾರ ಸ್ವಾಮಿಜಿಯವರು ಅಕ್ಷರ, ಅನ್ನ ದಾಸೋಹದ ಮೂಲಕ ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡುವ ಮೂಲಕ ಸಮಾಜದ ಆಸ್ತಿಯಾಗಿದ್ದಾರೆ. ಎಂದು ಹಂಪಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ಬಣ್ಣಿಸಿದರು.
ತುಮಕೂರು ಸಿದ್ದಗಂಗಾ ಮಠದ ಹಳೆ ವಿದ್ಯಾರ್ಥಿಗಳು ಹಂಪಿಯ ಶಿವರಾಮ ಅವಧೂತರ ಮಠದಲ್ಲಿ ಆಯೋಜಿಸಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ರವರ 114 ನೇ ಜನ್ಮದಿನೋತ್ಸವ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣ ಕೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಶ್ರೀಗಳ ಪ್ರತಿಯೊಬ್ಬರು ಸ್ಮರಿಸುವ ಮೂಲಕ ಸೇವಾ ಮನೋಭಾವನೆ ಮೈಗೂಡಿಸಿಕೊಳ್ಳಬೇಕು ಎಂದರು.
ಸಿದ್ದಗಂಗಾ ಮಠದ ಹಳೆ ವಿದ್ಯಾರ್ಥಿ ವಿರುಪಾಕ್ಷಿ ವಿ ಹಂಪಿ ಮಾತನಾಡಿ, ದಿ.ಡಾ.ಶಿವಕುಮಾರ ಸ್ವಾಮಿಜಿಯವರು ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದ ಅವರು, ಶ್ರೀಗಳು ತೋರಿದ ಮಾರ್ಗದಿಂದ ಸಮಾಜಮುಖಿ ಕೆಲಸ-ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಮೋಹನ್ ಚಿಕ್ಕ ಭಟ್ಟ ಜೋಶಿ ಅಧ್ಯಕ್ಷತೆ ವಹಿಸಿಕೊಂಡಿದ್ದರು. ವಿ ಶಿವಕುಮಾರ್, ವಿಶ್ವನಾಥ್, ಶಿವಕುಮಾರ್ ವಿ ಶಿವರಾಂ ಹಾಗೂ ಎಂ ಶಂಕ್ರಪ್ಪ ಸೇರಿದಂತೆ ಇತರರು ಹಾಜರಿದ್ದರು.