ಸಿಡಿ ಷಡ್ಯಂತ್ರ ಬಯಲು

Many CDs on white background

ಮೈಸೂರು, ಮಾ. ೨೭- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಷಡ್ಯಂತ್ರ ನಡೆಸಿರುವ ಮಹಾನಾಯಕ ಯಾರೆಂಬುದು ಬಯಲಾಗಲಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿರದು.
ಈ ಸಿಡಿ ಪ್ರಕರಣದ ಹಿಂದೆ ಇರುವ ಮಹಾನಾಯಕ ಯಾರು ಎಂಬ ಕುತೂಹಲ ರಾಜ್ಯದ ಜನತೆಗಿರುವಷ್ಟು ನಮಗೂ ಇದೆ. ಎಸ್‌ಐಟಿ ತನಿಖೆಯಿಂದ ಸಿಡಿ ಷಡ್ಯಂತ್ರದ ಹಿಂದಿರುವ ಮಹಾನಾಯಕನ ಹೆಸರು ಜಗಜ್ಜಾಹೀರಾಗಲಿದೆ ಎಂದು ಹೇಳಿದರು.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಸಿಡಿ ಹಿಂದೆ ಡಿ.ಕೆ. ಶಿವಕುಮಾರ್ ಅವರು ಇದ್ದಾರೆ ಎಂಬ ರೀತಿಯಲ್ಲಿ ಹೆಸರು ಹರಿದಾಡುತ್ತಿದೆ. ಇದು ಅಚ್ಛರಿ ವಿಷಯ ಏನಲ್ಲ ಎಂದು ಸೋಮಶೇಖರ್ ಹೇಳುವ ಮೂಲಕ ಪರೋಕ್ಷವಾಗಿ ಶಿವಕುಮಾರ್ ಇದರ ಹಿಂದೆ ಇರಬಹುದೇ ಎಂಬ ಅನುಮಾನ ಹೊರ ಹಾಕಿದರು.
ಎಸ್‌ಐಟಿ ತನಿಖೆ ನಂತರವೇ ಸತ್ಯಾಂಶ ತಿಳಿಯಲಿದೆ. ಸಿಡಿ ಪ್ರಕರಣದ ನಿರ್ಮಾಪಕರು, ನಿರ್ದೇಶಕರು, ಚಿತ್ರಕಥೆ ಬರೆದವರು ಎಲ್ಲವಿಚಾರಗಳನ್ನು ಪರಿಶೀಲಿಸುವಂತೆ ವಿಧಾನಸಭೆಯಲ್ಲಿ ನಾವೆಲ್ಲಾ ಹೇಳಿದ್ದೇವೆ. ಸದ್ಯದಲ್ಲೇ ಸತ್ಯಾಂಶ ಗೊತ್ತಾಗಲಿದೆ ಎಂದರು.
ಸಿಡಿ ಪ್ರಕರಣದಲ್ಲಿ ರಾಜಕಾರಣಿಗಳನ್ನೇ ಗುರಿ ಮಾಡಲಾಗುತ್ತದೆ. ಈಗಾಗಲೇ ಸಂತ್ರಸ್ತ ಯುವತಿ ವಿಡಿಯೋ ಮೂಲಕ ಕೆಲನಾಯಕರ ಹೆಸರುಗಳನ್ನು ಹೇಳಿದ್ದಾಳೆ. ಸಂತ್ರಸ್ಥೆಗೆ ಯಾರಾದರೂ ಹೆಸರು ಹೇಳಿ ಎಂದು ಹೇಳಿಕೊಟ್ಟಿರಬಹುದೇ ಎಂಬ ಅನುಮಾನಗಳು ಇವೆ ಎಂದರು.
ಸಿಡಿ ಬಗ್ಗೆ ಎಸ್‌ಐಟಿ ಪೊಲೀಸರು ನಿಸ್ಪಕ್ಷಪಾತ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಗೃಹ ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಂತ್ರಸ್ಥೆ ಯುವತಿಗೆ ರಕ್ಷಣೆ ನೀಡಲು ಸರ್ಕಾರ ಬದ್ಧವಿದೆ. ರಕ್ಷಣೆ ನೀಡುವುದಿಲ್ಲ ಎಂಬುದು ಸುಳ್ಳು ಎಂದರು.