ಸಿಡಿ ಲೇಡಿ ಪ್ರಕರಣ ಉಪ ಚುನಾವಣೆ ಮೇಲೆ ಪ್ರಭಾವ ಬೀರದು : ಶ್ರೀರಾಮುಲು

ಬಳ್ಳಾರಿ ಮಾ 31 : ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ಮೇಲೆ ಸಿಡಿ ಪ್ರಕರಣ ಪರಿಣಾಮ ಭೀರಲ್ಲ, ಮೂರು ಕಡೆ ಸಹ ಬಿಜೆಪಿ ಗೆಲುವು ಸಾಧಿಸಲಿದೆಂದು ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಅವರಿಂದು ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಉಪಚುನಾವಣೆ ಯಲ್ಲಿ ಯಾವ ಜೋಡೆತ್ತು ಕೆಲಸ ಮಾಡಲ್ಲ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಎಸ್. ವಿಜಯೇಂದ್ರ ಉಪ ಚುನಾವಣೆಗಳಿಗೆ ಬಂದ್ರೇ ಹಣದ ಹೊಳೆ ಹರಿಸುತ್ತಾರೆ ಅನ್ನೋ ಆರೋಪ ಸಾಮಾನ್ಯವಾಗಿದೆ.
ಈ ಹಿಂದೆ ನಡೆದ 17 ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್ ನಾಯಕರು ಇದೇ ಆರೋಪ ಮಾಡಿದ್ದರು. ವಿಜಯೇಂದ್ರ ಮುಖ್ಯಮಂತ್ರಿ ಮಗ ಆಗಿರೋದು ತಪ್ಪಾ..? ಮುಖ್ಯಮಂತ್ರಿ ಮಗ ಅನ್ನೋ ಕಾರಣಕ್ಕೆ ಗೌರವ ಸ್ವಲ್ಪ ಹೆಚ್ಚಾಗಿ ಕೊಡಬಹುದು. ಅದಕ್ಕಾಗಿ‌ಅವರನ್ನು ಟಾರ್ಗೆಟ್ ಮಾಡೋದು ಎಷ್ಟು ಸರಿ ಎಂದರು.
ಮಸ್ಕಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಹಣಕ್ಕೆ ಮಾರಾಟ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡ್ತಾರೆ ಇದೆಲ್ಲ ಸುಳ್ಳು ಎಂದರು. ಬಾಂಬೆ ಗೋವಾಕ್ಕೆ ಯಾರು ಮಜಾ ಮಾಡೋಕೆ ಹೋಗಿರಲಿಲ್ಲ. ಹಾಗೇ ಹೋಗಿದ್ರೇ ಉಪ ಚುನಾವಣೆಯಲ್ಲಿ ನಾವು ಗೆಲ್ತಿರಲಿಲ್ಲ ಎಂದರು.
ಸರಿ ಮಾಡುವೆ:
ರಾಜ್ಯದ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿ ಖೂಬಾ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡುವೆ. ಖುಬಾ ಸೇರಿದಂತೆ ಬಂಡಾಯ ಅಭ್ಯರ್ಥಿಗಳ ಜೊತೆ ಸಂಧಾನ ಮಾಡುವೆ. ಈ ಕುರಿತು ಪಜ್ಷದ ರಾಜ್ಯ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಜೊತೆಗೆ ಮಾತನಾಡುವೆ ಎಂದರು.
ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಎಸ್.ಐಟಿ ತನ್ನ ಕೆಲಸ ಮಾಡುತ್ತಿದೆ. ಯಾರು ಇಲ್ಲಿ ಪ್ರಭಾವ ಭೀರಿಲ್ಲ. ತನಿಖೆ ಬಳಿಕ ಯಾರು ಸುಳ್ಳು ಯಾರು ಸತ್ಯ ಎಂದು ಗೊತ್ತಾಗಲಿದೆಂದರು.