ಸಿಡಿ ಲೇಡಿಗೆ ಕೊರೊನಾ ನೆಗೆಟಿವ್


ಬೆಂಗಳೂರು.ಮಾ೩೧: ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದಂತ ರಾಸಲೀಲೆಯಲ್ಲಿನ ಯುವತಿಗೆ ಕೊರೋನಾ ನೆಗೆಟಿವ್ ವರದಿ ನೆಗೆಟಿವ್ ಬಂದಿದೆ.
ಇಂದು ಮೆಡಿಕಲ್ ಪರೀಕ್ಷೆಗೆ ಕರೆದೊಯ್ಯುವ ಮೊದಲು, ಎಸ್‌ಐಟಿ ತಂಡವು ಆಕೆಯನ್ನು ಕೊರೋನಾ ಪರೀಕ್ಷೆಗೂ ಬೌರಿಂಗ್ ಆಸ್ಪತ್ರೆಯಲ್ಲಿ ಒಳಪಡಿಸಿದೆ. ಇಂತಹ ಕೊರೋನಾ ಪರೀಕ್ಷೆಯ ವರದಿ ಬಂದಿದ್ದು, ಎಸ್‌ಐಟಿ ನಿನ್ನೆಯ ವಿಚಾರಣೆ ಬಳಿಕ, ಇಂದು ಸಿಡಿ ಲೇಡಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು.
ನಗರದ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಸಂತ್ರಸ್ತ ಯುವತಿಯನ್ನು ಮೆಡಿಕಲ್ ಟೆಸ್ಟ್ ಮಾಡಿಸಲಾಗಿದೆ. ಇದಕ್ಕೂ ಮೊದಲು ಕೊರೋನಾ ಪರೀಕ್ಷೆಯನ್ನು ನಡೆಸಲಾಗಿದ್ದು, ಆಕೆಯ ಕೊರೋನಾ ಪರೀಕ್ಷೆಯ ವರದಿ ನಗೆಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಬಳಿಕ ಸಿಡಿ ಸಂತ್ರಸ್ತ ಯುವತಿಯನ್ನು ಸತತ ೨ ಗಂಟೆಯಿಂದ ನಡೆದಂತ ವೈದ್ಯಕೀಯ ತಪಾಸಣೆ ಮುಕ್ತಾಯಗೊಂಡಿದ್ದು, ಮುಂದಿನ ಹಂತದಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ವೈದ್ಯಕೀಯ ತಪಾಸಣೆಗೆ ಎಸ್‌ಐಟಿ ಅಧಿಕಾರಿಗಳು ಒಳಪಡಿಸಲಿದ್ದಾರೆ ಎನ್ನಲಾಗಿದೆ.
ಕಳೆದ ನಿನ್ನೆಯಿಂದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಘಟನೆಗಳು ನಡೆಯುತ್ತಿವೆ. ಕೋರ್ಟ್ ಅನುಮತಿಯಿಂದಾಗಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಂತ ಸಿಡಿ ಸಂತ್ರಸ್ತ ಯುವತಿ, ತನ್ನ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ನೀಡಿದ್ದರು. ಇದಾದ ಬಳಿಕ ಎಸ್‌ಐಟಿ ಕೋರಿಕೆಯ ಮೇರೆಗೆ ಸಿಡಿ ಸಂತ್ರಸ್ತೆಯನ್ನು ವಿಚಾರಣೆಗೂ ಒಳಪಡಿಸಲಾಗಿತ್ತು.