ಸಿಡಿ ಯುವತಿ ಕೋರ್ಟಿಗೆ ಹಾಜರು

C m m court Police protection

ಬೆಂಗಳೂರು,ಮಾ.೩೦- ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿರುವ ಮಾಜಿ ಸಚಿವ ರಮೇಶ್ ಜಾರಕಿ ಹೊಳಿಗೆ ಸೇರಿದೆ ಎನ್ನಲಾದ ರಾಸಲೀಲೆ ಸಿಡಿ ಪ್ರಕರಣ ಹಲವು ದಿನಗಳ ಹೈಡ್ರಾಮಾ ನಂತರ ಸಂತ್ರಸ್ತೆ ಯುವತಿ ಇಂದು ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಯುವತಿ ನೀಡಿರುವ ಹೇಳಿಕೆ ಕೌತುಕಕ್ಕೆ ಕಾರಣವಾಗಿದೆ.
ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ನ ೨೪ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಸಿಡಿ ಯುವತಿಯು ಹಾಜರಾಗಿ ಸ್ವ ಇಚ್ಭಾ ಹೇಳಿಕೆಯನ್ನು ದಾಖಲಿಸಿದ್ದಾರೆ.
ಕೋರ್ಟ್‌ಗೆ ಹಾಜರು ಪಡಿಸಲು ಅನುಮತಿ ದೊರೆತಿರುವುದರಿಂದ ತಮ್ಮ ಪರ ವಕೀಲ ಜಗದೀಶ್ ಕುಮಾರ್ ಅವರೊಂದಿಗೆ ಕೋರ್ಟ್ ಮುಂದೆ ಯುವತಿಯು ಹಾಜರಾಗಿ ಸಿಆರ್ ಪಿಸಿ ೧೬೪ ಸೆಕ್ಷನ್ ಅನ್ವಯ ಹೇಳಿಕೆ ದಾಖಲಿಸಿದ್ದಾರೆ.
ನ್ಯಾಯಾಧೀಶ ಬಾಲಗೋಪಾಲ್ ಅವರ ಮುಂದೆ ಯುವತಿಯು ಹಾಜರಾದ ವೇಳೆ ಯುವತಿಯ ಪರ ವಕೀಲ ಜಗದೀಶ್ ಕುಮಾರ್ ಪ್ರಕರಣದ ತನಿಖಾಧಿಕಾರಿಗಳಾದ ಎಸಿಪಿ ಗೀತಾ ಹಾಗೂ ಕಬ್ಬನ್ ಪಾರ್ಕ್ ಇನ್ಸ್‌ಪೆಕ್ಟರ್ ಮಾರುತಿ ಅವರನ್ನು ಹೊರತುಪಡಿಸಿ ಯಾರಿಗೂ ಅವಕಾಶ ನೀಡಿರಲಿಲ್ಲ.
ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ನ ನಿನ್ನೆ ಡೆಪ್ಯುಟಿ ರಿಜಿಸ್ಟ್ರಾರ್ ಅವರನ್ನು ಭೇಟಿಮಾಡಿ ಯುವತಿಯನ್ನು ನ್ಯಾಯಧೀಶರ ಮುಂದೆ ಹಾಜರುಪಡಿಸಲು ಅವಕಾಶ ನೀಡುವಂತೆ ವಕೀಲ ಜಗದೀಶ್ ಕುಮಾರ್ ಅವರು ವಿನಂತಿಸಿದ್ದರು.
ಅದರಂತೆ ಇಂದು ವಕೀಲ ಜಗದೀಶ್ ಕುಮಾರ್ ತನಿಖಾಧಿಕಾರಿಗಳಾದ ಎಸಿಪಿ ಗೀತಾ ಹಾಗೂ ಇನ್ಸ್‌ಪೆಕ್ಟರ್ ಮಾರುತಿ ಅವರನ್ನು ಕರೆಸಿ ನ್ಯಾಯಾಧೀಶ ಬಾಲಗೋಪಾಲ್ ವಿಚಾರಣೆ ನಡೆಸಿದರು.
ಸಿಡಿ ಯುವತಿಯು ೧೬೪ ಅಡಿ ಹೇಳಿಕೆ ದಾಖಲಿಸಲು ತನಿಖಾಧಿಕಾರಿಗಳು ಹಾಗೂ ವಕೀಲ ಜಗದೀಶ್ ಅವರು ಯಾವುದೇ ಅಕ್ಷೇಪಣೆ ಸಲ್ಲಿಸಲಿಲ್ಲ.
ಅದರಿಂದಾಗಿ ನ್ಯಾಯಾಧೀಶರು ಯಾವ ಸಮಯ ದಿನಾಂಕದಲ್ಲಿ ಹಾಜರುಪಡಿಸಲಾಗುವುದು ಎಂದು ಯುವತಿಯ ಪರ ವಕೀಲರಿಗೆ ಸೂಚನೆ ನೀಡಿದ ತಕ್ಷಣವೇ ವಕೀಲ ಜಗದೀಶ್ ಕುಮಾರ್ ಲಿಖಿತ ರೂಪದಲ್ಲಿ ಯುವತಿಯ ಹಾಜರಾಗುವ ಸಮಯವನ್ನು ತಿಳಿಸಿದರು.
ಕೂಡಲೇ ನ್ಯಾಯಾಧೀಶರು ಯುವತಿಗೆ ಭದ್ರತೆ ಒದಗಿಸುವಂತೆ ಎಸ್ ಐಟಿಗೆ ಸೂಚನೆ ನೀಡಿದರು.
ಯುವತಿಯ ಹೇಳಿಕೆಯ ದಾಖಲು ವೇಳೆ ಎಸಿಪಿ ಗೀತಾ ಹಾಗೂ ಇನ್ಸ್‌ಪೆಕ್ಟರ್ ಮಾರುತಿ ಹಾಜರಾಗಿದ್ದು ವಿಚಾರಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಯುವತಿಯು ಹಾಜರಾಗುವ ಮುನ್ನ ವಕೀಲ ಜಗದೀಶ್ ಮಾತನಾಡಿ ಯುವತಿಯು ಬೆಂಗಳೂರಿನಲ್ಲೇ ಇದ್ದು ಎಲ್ಲಿಗೂ ಹೋಗಿರಲಿಲ್ಲ ಎಂದು ಮಾಹಿತಿ ನೀಡಿದರು.
ಅತ್ಯಾಚಾರ ಪ್ರಕರಣವು ಅತ್ಯಂತ ಗಂಭೀರವಾಗಿದೆ.ಅದರ ಬಗ್ಗೆ ಸುಪ್ರೀಂ ಕೋರ್ಟ್ ಮಾರ್ಗ ಸೂಚಿಯ ಅನ್ವಯ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.
ನ್ಯಾಯಾಲಯದ ಅನುಮತಿ ದೊರೆತಿರುವುದರಿಂದ ಸಂತ್ರಸ್ತ ಯುವತಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ಹೇಳಿದರು.
ಇತಿಹಾಸದಲ್ಲೇ ಮೂದಲು ಪೊಲೀಸರು ಹಾಗೂ ಎಸ್ ಐಟಿಯನ್ನು ನಂಬದೇ ಹೇಳಿಕೆ ದಾಖಲಿಸಲು ಸಂತ್ರಸ್ತ ಯುವತಿಯು ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಾಗಿ ೨೮ ದಿನ ಕಳೆದಿದ್ದು ಅಲ್ಲಿಂದ ಇಲ್ಲಿಯವರೆಗೆ ಯುವತಿ ನಾಪತ್ತೆಯಾಗಿದ್ದರು.
ಬಿಗಿ ಭದ್ರತೆ:
ಸಂತ್ರಸ್ತ ಯುವತಿ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೋರ್ಟ್ ಬಳಿ ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟಿಲ್ ನೇತೃತ್ವದಲ್ಲಿ ಭದ್ರತೆಗಾಗಿ ಒಬ್ಬರು ಡಿಸಿಪಿ, ಇಬ್ಬರು ಎಸಿಪಿ೫ ಜನ ಇನ್?ಸ್ಪೆಕ್ಟರ್?, ೧೦ ಜನ ಸಬ್ ಇನ್?ಸ್ಪೆಕ್ಟರ್ ಗಳನ್ನು ನಿಯೋಜಿಸಲಾಗಿತ್ತು.ಹೆಚ್ಚಿನ ಮಹಿಳಾ ಪೊಲೀಸರನ್ನು ಒಳಗೊಂಡ ೧೦೦ಕ್ಕೂ ಮಂದಿ ಭದ್ರತೆ ಕೈಗೊಂಡಿದ್ದರು.
ಮ್ಯಾಜಿಸ್ಟ್ರೇಟ್ ಮುಂಭಾಗದ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು ಸಂಚಾರ ಪೊಲೀಸರು ಸುಗಮ ಸಂಚಾರಕ್ಕೆ ಹರಸಾಹಸ ಪಡಬೇಕಾಯಿತು.