ಸಿಡಿ ಬಂಡಿ ರಥೋತ್ಸವ
  ನಾರಾ ಭರತ್ ರೆಡ್ಡಿಯಿಂದ ಪ್ರಸಾದ ಬಳೆ ವಿತರಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.28:  ನಗರದ ಆರಾಧ್ಯ ದೇವತೆ ಕನಕದುರ್ಗಮ್ಮ ದೇವಿ ಸಿಡಿ ಬಂಡಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಇಂದು ದೇವಸ್ಥಾನದ ಬಳಿ  ಕಾಂಗ್ರೆಸ್ ಮುಖಂಡ, ಮಾಜಿ ಜಿಪಂ ಸದಸ್ಯ, ಟಚ್ ಫಾರ್ ಲೈಫ್ ಫೌಂಡೇಶನ್‍ನ ಸಂಸ್ಥಾಪಕ ನಾರಾ ಭರತ್ ರೆಡ್ಡಿ ಅವರು ದೇವಸ್ಥಾನಕ್ಕೆ ಆಗಮಿಸಿದ ಭಕ್ತ ಸಮೂಹಕ್ಕೆ 5 ಕ್ವಿಂಟಾಲ್ ಸಿಹಿ ಲಾಡಿನ ಪ್ರಸಾದ ವಿತರಣೆ ಮಾಡಿದರು.
ಮಹಿಳಾ ಭಕ್ತರಿಗೆ ಮುತ್ತೈದೆಯರ ಅಲಂಕಾರದ ಬಳೆಗಳನ್ನು ಸಹ  ವಿತರಿಸಿದರು.
ಬೆಳಿಗ್ಗೆಯಿಂದ ಈ  ಕಾರ್ಯ ನಡೆಯಿತು.
ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಪ್ರಸಾದ ಸ್ವೀಕರಿಸಿ ತಮ್ಮ ಈ ಧಾರ್ಮಿಕ ಸೇವೆಯನ್ನು ಪೂರ್ಣಗೊಳಿಸಲು ಅವಕಾಶ ಮಾಡಿಕೊಡಬೇಕೆಂದು ನಾರಾ ಭರತ್ ರೆಡ್ಡಿ ಹಾಗೂ ಸಂಘಟಕರು ಮನವಿ ಮಾಡಿದ್ದಾರೆ.