ಸಿಡಿ ಪ್ರಕರಣ ನ್ಯಾಯಸಮ್ಮತ ತನಿಖೆಗೆ ಬೊಮ್ಮಾಯಿ

ಕಲಬುರಗಿ,ಏ. ೬- ಸಿಡಿ ಪ್ರಕರಣದ ತನಿಖೆಯನ್ನು ನ್ಯಾಯಸಮ್ಮತವಾಗಿ ನಡೆಸುವಂತೆ ವಿಶೇಷ ತನಿಖಾ ದಳದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ವಿಷಯದಲ್ಲಿ ಸರಕಾರ ಸತ್ಯದ ಪರವಾಗಿದೆಯೆಯೋ ವಿನಃ ಯಾರ ಪರವೂ ಇಲ್ಲ ನ್ಯಾಯಸಮ್ಮತವಾಗಿ ತನಿಖೆ ನಡೆಸುವಂತೆ ಮೊದಲ ದಿನದಿಂದಲೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಷಯದಲ್ಲಿ ಸತ್ಯಾಂಶ ಹೊರ ಬರಬೇಕು ಎನ್ನುವುದು ಸರ್ಕಾರದ ಉದ್ದೇಶ ಎಂದು ಅವರು ತಿಳಿಸಿದರು
ವಿಶೇಷ ತನಿಖಾ ದಳದ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಯಾವುದೇ ವಿಷಯಗಳಿದ್ದರೂ ಅವರು ತಿಳಿಸುತ್ತಾರೆ ಎಂದರು.
ಸಂತ್ರಸ್ತೆ ಪರ ವಕೀಲರ ಹೇಳಿಕೆ ಸೇರಿದಂತೆ ಎಲ್ಲಾ ವಿಷಯಗಳಿಗೆ ವಿಶೇಷ ತನಿಖಾ ದಳದ ಅಧಿಕಾರಿಗಳು ಉತ್ತರ ನೀಡುತ್ತಾರೆ ತಾವು ಈ ಸಂಬಂಧ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಹೇಳಿದರು.