ಸಿಡಿ ಪ್ರಕರಣ-ನನ್ನನ್ನು ಏನು ಕೇಳಬೇಡಿ

ಕೋಲಾರ,ಏ.೨: ಸಿಡಿ ಪ್ರಕರಣಕ್ಕೂ ನನಗೂ ಯಾವುದೆ ಸಂಭಂಧವಿಲ್ಲ, ನನ್ನೇನು ಕೇಳಬೇಡಿ ಎಂದು ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ನೀಡಿದ್ರು. ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ನನಗಿಲ್ಲ, ಕಾನೂನು ಚೌಕಟ್ಟಿನಲ್ಲಿ ನಡೆಯುತ್ತಿದೆ ಹೀಗಾಹಿ ಈ ವಿಚಾರದ ಕುರಿತು ಹೆಚ್ಚು ಆಸಕ್ತಿಯಿಂದ ವ್ಯಾಖ್ಯಾನ ಮಾಡುವುದು ನನ್ನ ಯೋಗ್ಯತೆಗೆ ಹಾಗೂ ಗೌರವಕ್ಕೆ ಒಳ್ಳೆಯದಲ್ಲ ಎಂದರು. ಇನ್ನು ಅಧಿವೇಶನ ಸಮಯದಲ್ಲಿ ನ್ಯಾಯವಾಗಿ ಮಾತನಾಡಿದ್ದೇನೆ, ಸಂತ್ರಸ್ತೆ ಕೋರ್ಟ್ ಮುಂದೆ ಬಂದಮೇಲೆ ಎಲ್ಲಾ ಮುಗೀತು, ಇನ್ನು ಕೋರ್ಟ್ ಆಯ್ತು ಅವರಾಯ್ತು ಅಷ್ಟೆ ಎಂದ ಅವರು, ನ್ಯಾಯಾಂಗವೇ ಸಂತ್ರಸ್ತೆಗೆ ಅವಕಾಶ ನೀಡಿದ್ದು, ವ್ಯವಸ್ಥೆಯ ಮೇಲೆ ನಂಬಿಕೆ ಇಡಬೇಕು ಎಂದು ಹೇಳಿದರು. ಸಿಡಿ ವಿಚಾರವಾಗಿ ರಾಜಕೀಯ ಪಕ್ಷಗಳ ಮಧ್ಯೆ ವಾಗ್ವಾದಕ್ಕೆ ಪ್ರತಿಕ್ರಿಯಿಸಿದ ಅವರು, ಕೊಚ್ಚೆ ನೀರಲ್ಲಿ ಸಂಪಿಗೆ ವಾಸನೆ ಬರುವುದಿಲ್ಲ, ಮನುಷ್ಯ ಅಂದಮೇಲೆ ಚಪಲ ಇರತ್ತೆ, ಪಂಚೇದ್ರಿಯಗಳು ಕೆಲಸ ಮಾಡುತ್ತದೆ.
ಇದೆಲ್ಲಾ ಕಾಮನ್, ದೊಡ್ಡ ವಿಚಾರವೇ ಅಲ್ಲ ಆದರೆ ಜನರ ಕಷ್ಟ ಯಾರು ಮಾತಾಡಲ್ಲ ಎಂದರು. ಜೊತೆಗೆ ಅಸಹ್ಯವಾಗಿ ನಡೆದುಕೊಂಡಾಗ ಸಂವಿಧಾನವೇ ಶಿಕ್ಷೆ ಕೊಡುತ್ತೆ ಎಂದು ತಿಳಿಸಿದರು. ಇನ್ನು ಡಿಕೆ ಶಿವಕುಮಾರ್ ಕಾರಿನ ಮೇಲೆ ಚಪ್ಪಲಿ ಎಸೆತ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಚಪ್ಪಲಿ ಹಳೆಯದಾಗಿತ್ತೇನೊ ಇರ್ಲಿ ಬಿಡಿ, ಕಾರ್ಪೊರೇಷನ್ ಅವ್ರು ಕ್ಲೀನ್ ಮಾಡ್ತಾರೆ ಎಂದರು. ರಮೇಶ್ ಜಾರಕಿಹೊಳಿ ರಾಜಿನಾಮೆಗೆ ಕಾಂಗ್ರೆಸ್ ಆಗ್ರಹ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಕಾಂಗ್ರೆಸ್ ಆದರು ಆಗ್ರಹ ಮಾಡಬಹುದು ಯಾರಾದರು ಮಾಡಬಹುದು ಎಂದು ತಿಳಿಸಿದರು.